TIGHT BINGING BOOK

ಕವಿರಾಜಮಾರ್ಗವಿವೇಕ

ಖಾಗ

ಮುಳಿಯ ತಿಮ್ಮಪ್ಪಯ್ಯ

ಮಂಗಳೂರು

UNIVERSAL LIBRARY L)

OU 19861

AdVddl | IVSHAINN

೦೭- -902--26-3-76--5,000 OSMANIA UNIVERSITY LIBRARY Call No. fc 9೨ .| /N 3FK Accession No. Ic 73 Author . 9೪ ಅಕ ಯದಿ FU I.

This book should be returned On Or before the date Jast marked below )

ಹೋತ ರಾ ಲತ ಾರವನಾನಾಾಾರಾಾಣದನನಾವಾರಿನಾರರಾ ಅದಾವ

ಕಾಣಿಕೆ

ಮಂಗಳೂರು ಸೈಂಟ್‌ ಎಲೋಶಿಯಸ್‌ ಕೋಲೇಜಿನ ಕನ್ನಡ ವಿದ್ಯಾರ್ಥಿ ಗಳ ವರ್ಗಕ್ಕೆ ವಿಶೇಷವಾಗಿ ಕನ್ನಡ ವಿದ್ಯಾರ್ಥಿ ಸಂಘಕ್ಕೆ ನನ್ನಲ್ಲಿ ಅಪಾರವಾದ ವಿಶ್ವಾಸ. ಮೂವತ್ತು ವರ್ಷಗಳಿಂದ ಇಲ್ಲಿ ಉಪಾಧ್ಯಾಯನಾಗಿದ್ದು ಅವರೆದೆ ಯನ್ನೇ ನನ್ನ ಕನ್ನಡ ಸೇವೆಯ ಪ್ರಯೋಗ ಶಾಲೆಯನ್ನಾಗಿಸಿಕೊಂಡು ದುಡಿಯು. ತ್ತಿದ್ದೇನೆ. ಸಂಗತಿಯನ್ನು, ಇತ್ತೀಚೆಗಿನ ವಿದ್ಯಾರ್ಥಿಗಳು ಮಾತ್ರವೇ ಅಲ್ಲ; ಅಂದಿನಿಂದಿಂದಿನ ವರೆಗಿನ ಪ್ರತಿ ವರ್ಷದವರೂ ಬಲ್ಲರು. ಅವರ ತಿಳಿವು. ಒಂದೆರಡು ಬಾರಿ ಉಕ್ಕಿ ಕಾರ್ಯರೂಪವಾಗಿ ಹರಿದುದೂ ಇದೆ. ಬಹುಶ್ಯೂ ೧೯೩೧ನೆ ಇಸನಿಯಲ್ಲೆಂದು ತೋರುತ್ತಿದೆ. ಕನ್ನಡ ವಿದ್ಯಾರ್ಥಿ ಸಂಘದ ಅಂದಿನ ಸದಸ್ಯರು ನಾನು ಬರೆದ ಸೊಬಗಿನ ಬಳ್ಳಿ ಎಂಬ ಕಾವ್ಯವನ್ನು ಅಂದ ವಾಗಿ ಅಚ್ಚು ಹಾಕಿಸಿದರು. ಅದು ಅಚ್ಛಗನ್ನಡದಲ್ಲಿ - ಎಂದರೆ ಪ್ರತಿಜ್ಞಾ ಪೂರ್ವಕವಾಗಿ ಸಂಸ್ಕೃತ ರಹಿತವಾದ ತಿಳಿಗನ್ನಡದಲ್ಲಿ - ಬರೆದುದು. ವರೆಗೆ ತಿಳಿದು ಬಂದಂತೆ, ರೀತಿಯ ಕನ್ನಡ ಕಾವ್ಯವೆಂದರೆ, ಸುಮಾರು ೧೩ನೆ ಶತಮಾನದಲ್ಲಿ ಆಂಡಯ್ಯನು ಬರೆದ "ಕಾವನಗಲ್ಲ' (ಕಬ್ಬಿಗರ ಕಾವ)ವೇ ಮೊದಲಿನದಾದರೆ ಇದು ದಾರಿಯಲ್ಲಿ ಮತ್ತಿನದು. ಎರಡನೆಯ ಬಾರಿ ಹಾಗೆ ಕಾರ್ಯರೂಪದಲ್ಲಿ ಮುಂಬರಿದುದೆಂದರೆ ಕಳೆದ ಕೋಲೇಜಿನ ವರ್ಷಾಂ ತೋತ್ಸವದ ಸಮಾರಂಭದಲ್ಲಿ. ಉತ್ಸವಾಧ್ಯಕ್ಷರಾಗಿದ್ದ "ಕರ್ಣಾಟಕ ಏಕೀಕರಣ? ಸಂಸ್ಥೆಯ ಪ್ರಮುಖರಾದ ನಮ್ಮ ಶ್ರೀ ಕೆ. ಬಿ. ಜಿನರಾಜ ಹೆಗ್ಗಡೆಯವರ ಹಸ್ತ ದಿಂದ ಕನ್ನಡ ಸಂಘದವರು ನನಗೊಂದು ನಿಧಿಯನ್ನೊಪ್ಪಿಸಿದರು. ಅದರ ಸ್ಮರಣಾರ್ಥವಾಗಿ “ಕವಿರಾಜಮಾರ್ಗ - ವಿವೇಕ” - ಪ್ರಥಮ ಭಾಗವನ್ನು ಅಚ್ಚು ಹಾಕಿಸಬೇಕು; ಕನ್ನಡ ಸಂಘಕ್ಕೆ - ಆಯಾ ಸದಸ್ಯರಿಗೆ ಕಾಣಿಕೆಯಾಗಿ ಒಪ್ಪಿಸಬೇಕು ಎಂದು ಭಾವಿಸಿದ್ದೆ. ಆದರೆ, ಕಳೆದ ವರ್ಷಕ್ಕದು "ಮನಸ್ಸಿನ ಮಂಡಿಗೆ'ಯೇ ಆಗಿಬಿಟ್ಟಿತು. ಕಾಗದ ಮೊದಲಾದುವುಗಳ ಅನಾನುಕೂಲ್ಯ ದಿಂದಾಗಿ ವರ್ಷವೂ ಹಾಗೆಯೇ ಆಗಿ ಬಿಡುವುದೋ ಎಂಬ ಅಂಜಿಕೆಯೂ

ಗ್ರಂಥರಚನೆಯಲ್ಲಿ ನೆರವಾದ ಗ್ರಂಥಗಳೂ ಪ್ರಸಿದ್ದ ಲೇಖಗಳೂ,

ಕನ್ನಡ (೧) ಕವಿರಾಜಮಾರ್ಗ. (೨) ಕಾವ್ಯಾವಲೋಕನ. (೩) ಪಂಪ ಭಾರತ. (೪) ನಾಡೋಜಪಂಪ. (೫) ಪ್ರಬುದ್ಧ ಕರ್ಣಾಟಕ. (೬) ಕನ್ನಡ. ಸಾಹಿತ್ಯ ಪರಿಷತ್ಪತ್ರಿಕೆ.

ಇಂಗ್ಲಿಷು

(1) Rashtrakutas and their Times. by SriA.S. Altekar. (2) Early History of the Dekkan by Sri R.N. Bhandarkar. (3) Collected works of Sri R. G. Bhandarkar. (4) Eastern Chalukyas-by Sri D.C. Ganguly. (5) Elements of South- Indians Paliography - 1878. (6) Sources of Karnataka History, by Sri 5. Shrikanta Shastri 1940.

ಸಂಸ್ಕೃತ

(೧) ಕೌಟಿಲೀಯಂ ಅರ್ಥಶಾಸ್ತ್ರಂ. (೨) ಚಾಣಕ್ಯ ಸೂತ್ರಂ. (೩)

ಪ್ರತಾಪ ರುದ್ರೀಯಂ. ಶಾಸನಗಳು

(೧) ಅಮೋಘವರ್ಷ ನೃಪತುಂಗನ ಸಂಜನ ಶಾಸನ. (೨) ಅಮೋಘ ವರ್ಷ ನೃಪತುಂಗನ ಕೊಣ್ಣೂರು ಶಾಸನ. (೩) Epi. Carna Vol. 17111 ಸೊರಬ ನಂ. 85. (೪) Indi-Anti Vol. VIII ನೃಪತುಂಗನ ಕಾಲದ ಕನ್ನೀರಿ ಶಾಸನ. (೫) Epigraphia Indica Vol. IT-VI- VI]. (೬) ಜಗತ್ತುಂಗ ಮೂರನೆ ಗೋವಿಂದರಾಜನ ಮಂಡಳ-ಶಾಸನ. (೭) ಇನ್ನೂ ಹಲವು ಶಾಸನಭಾಗಗಳು.

ಅನುಕ್ರಮಣಾಕ

pS puunawenaememmemennaneenen

ರಾಷ್ಟ್ರಕೂಟ ವಂಶ

ರಾಷ್ಟ್ರಕೂಟರು ಹುಟ್ಟುಗನ್ನಡಿಗರು. ರಾಷ್ಟ್ರಕೂಟ ವಂಶದ ಮೂಲ ನಿಚಾರವೂ ವಂಶಚಿತ್ರವೂ. ಆದಿಯ ಐವರ ಸಾಮಾನ್ಯ ಪರಿಚಯ, ರಟ್ಟಿ-ರಾಷ್ಟ್ರಕೂಟರು.

ರಾಷ್ಟ್ರಕೂಟ - ತ್ರಿಮೂರ್ತಿಗಳು

ದಂತಿದುರ್ಗನೂ ಅವನ ರಾಜಧಾನಿಯೂ. ಅಕಾಲವರ್ಷ-ಕೃಷ್ಣರಾಜ. ಧ್ರುವ-ನಿರುಪಮ.

ಪ್ರಭೂತವರ್ಷ - ಗೋವಿಂದ

ಜಗತ್ತುಂಗನ ವಿನಯೋದಾತ್ತತಾ ಪ್ರತಾಪಗಳು. ಗೋವಿಂದರಾಜನು ಭಾರತ ಜಕ್ರವರ್ತಿ. ಗೋವಿಂದನ ರಾಜಧಾನಿ. ಪೋಷಕಾಧಾರ. ಗೋವಿಂದನ ಕಾಲದ ಕನ್ನಡ ಸಾಹಿತ್ಯದ ಸೂಚನೆ.

ಅಮೋಘವರ್ಷ - ನೃಪತುಂಗ

ರಾಜ್ಯವಿಪ್ಲವ. ವಿಪ್ಲ್ಪವವೂ ತನ್ನಿವಾರಣೋಪಾಯವೂ. ಪುನರುದಯ. ಮತ್ತಿನ ಸಂಕಟ. ಸಂಕಟದ ನಿವೃತ್ತಿಯೂ ರಾಜ್ಯಶಾಂತಿಯೂ.

ನೃಪತುಂಗನ ಆಳಿಕೆ

ಅಧಿಕಾರಿಗಳ ಸ್ವರೂಪ, ಕಿ.ಶ. ೮೬೧ ಕೊಳನೂರ ಶಾಸನ. ಕ್ರಿ.ಶ. ೮೭೧ ಸಂಜನ ಶಾಸನ. ಕ್ರಿಶ. ೮೦೯ ಗೋವಿಂದರಾಜನ ರಾಧನಪುರದ ಶಾಸನ. ರಾಷ್ಟ್ರಪತಿ. ವಿಷಯಪತಿ. ಗ್ರಾಮಕೂಟ. ಯುಕ್ತಕ ನಿಯು ಕ್ಷಕರು. ಮಹಾಜನವೂ ಅದರ ಅಧಿಕಾರ ಸೃರೂಪಗಳೂ. ಗೊರವರು.

ನೃಪತುಂಗನ ಉದಾತ್ತ ಧರ್ಮ. “|

"ನೃಪತುಂಗನ ಮತವಾವುದು?

ನೃಪತುಂಗನು ಜೈನನಾಗಿರಬಹುದೆ? ಆಧಾರಗಳ ವಿವೇಚನೆ. ಇನ್ನೊಂದು ಆಕ್ಸೇಪ.

ಪುಟ

೧೧

೧೯

೩೭

೫೨

೬೯

ii ಕವಿರಾಜ ಮಾರ್ಗಕಾರನಾರು? ೭೬

ನೃಪತುಂಗನನೇ ಗ್ರಂಥಕಾರನು ಎಂಬ ಹೇಳಿಕೆಯೂ ತನ್ನಿರಾಸವೂ. ಕವಿರಾಜ ಮಾರ್ಗಕಾರನು ನೃಪತುಂಗ ಸಭಾಸದನು. ಶ್ರೀಃ ವಿಜಯನೇ ಗ್ರಂಥಕಾರನು. ತ್ರೀ! ವಿಜಯನು ಹೆಲಮಂದಿ ಪ್ರಸಿದ್ಧ ಕವಿಗಳಿಂದ ಸ್ತುತನಾದವನು. ಜಯಾಟ್ವಿ ಅಥವಾ ಜಯ- ಎಂಬುದು ಗ್ರಂಥಕಾರನ ಮೂಲನಾಮ. ವಿಜಯಾಲ್ದಿನೆಂದರೆ ನೃಪತುಂಗನ ಸಂದ ಪಿಂದಾಳ್‌', ನೃಪತುಂಗ-ಜಯಾಬ್ವಿ- ಸಭಾಸದರ ಸಂಬಂಧ. ಇನ್ನೂ ಹೆಚ್ಚಿನ ಹೊಲಬುಗಳು. ಭ್ರಮ ನಿವೃತ್ತಿ. ಗ್ರಂಥಕಾರನ ಬಿರುದುಗೆಳು. ಗ್ರಂಥಕಾರನ ಹುಟ್ಟೂರು ಒಂಕುಂದವಿರಬಹುದೆ? ಗ್ರಂಥಕಾರನ ಮತ ಕಾಲಗಳು.

ಆಗಿನ ಕನ್ನಡದ ಸ್ವರೂಪವೂ ಗ್ರಂಥಕಾರನ ಗುರಿಯೂ ೧೧೩

ಆಗಿನ ಕಾಲದ ಗದ್ಯ ಸಾಶಿತ್ಯ. ಕನ್ನಡದ ಪುರಾತನ ಪದ್ಯ ಕಾವ್ಯ ಸ್ಪರೂಪ. ಪ್ರಕೃತ ಗ್ರಂಥದ ಉದ್ದೇಶ.

ಹಿನ್ನೋಟ ೧೩೧

ಇಸ ಕೂಟಿ- ವಂಶ

[1

Rk ಆಗಿಹೋದ ಪ್ರಖ್ಯಾತ ರಾಜವಂಶಗಳಲ್ಲಿ ರಾಷ್ಟ್ರ ಪ್ರಾಂತಗಳಲ್ಲಿ ತಲೆದೋರಿ ಅಲ್ಲಲ್ಲ ಬೆಳಗಿ ಮೇಲೆ ನಂದಿಹೋದ ಬೇರೆ ಜಬ rs ವು. ರಾಷಕೂಟ ಹುಟ್ಟುಗನ್ನಡಿಗರು ಟ್ರ ಕುಲ ಅಂಥದಲ್ಲ. ಹುಟ್ಟುಕನ್ನಡಿಗರಾದರೂ ಕುಲದ ಅರಸರೂಳಗೆ ಕೆಲವರ ಅರಸಾಳಿಕೆ ಭಾರತ ಭೂಮಿಯಲ್ಲಿ ತುಂಬಿ ಹೊರಗೆ ತುಳುಕಿದೆ. «ಕವಿರಾಜ ಮಾರ್ಗವು ಯಾವ ಮಹಾರಾಜನ ಆಶ್ರಯ ದಲ್ಲಿ ತಲೆದೋರಿತೋ ಅಮೋಘವರ್ಷ- ನೃಪತುಂಗನು ಸುಸಂಸ್ಕೃತರೂ ಸಮರ್ಥರೂ ಆದ ರಾಷ್ಟ್ರಕೂಟರಾಜರೊಳಿಗೆ ಒಬ್ಬನು. ಅನನ ಮಾನ್ಯ ಖೇಟಾಸ್ಥಾನಕ್ಕೆ ಜೈನ - ಅರೇಬಿಯಾ ಮೊದಲಾದ ಹೊರಗಣ ಭೂಭಾಗ ಗಳಿಂದ ರಾಯಭಾರಿಗಳು ಬರುತ್ತಿದ್ದರು. ಯಾವ ಭೇದಗಳೂ ಇಲ್ಲದೆ ಸರ್ವಮತೀಯರನ್ನೂ ಆತನು ಅವರವರ ಮನಸ್ಸಿಗೆ ಮೆಚ್ಚುಗೆಯಾಗು ವಂತೆ ದಾನಮಾನಾದಿಗಳಿಂದ ಮಸ್ಸಿಸುತ್ತಿದ್ದುದನ್ನು ಶಾಸನಗಳೇ ಘಂಟಾ ಘೋಷವಾಗಿ ಸಾರುತ್ತಿವೆ. ಅವನು ಭಾರತಭೂಮಿಗೆ ಸಾರ್ಥಕ ಚಕ್ರವರ್ತಿ ಎನ್ನು ನಂತಿಲ್ಲದಿದ್ದರೂ, ಆತನ ತಂದೆಯಾದ ಜಗತ್ತುಂಗ ಸನ್‌ ನಿಜವಾಗಿಯೂ ಪವವಿಗೇರಿದವನು. ಇದು ಅಭಿಮಾನಗ್ರಸ್ತರಾಗಿ ಆಡುವ ಮಾತಲ್ಲ; ಮಹಾರಾಷ್ಟ್ರ ದೇಶೀಯರೇ ಆಗಿರುವ ಶ್ರೀ ಅನಂತ ಸದಾಶಿವ ಅಳ್ತೇಕರರು ತಮ್ಮ ಪ್ರಸಿದ್ಧ ವಾದ *“ರಾಷ್ಟ್ರಕೂಟರೂ ಮತ್ತು ಅವರ ಕಾಲವೂ” ಎಂಬ ಗ್ರಂಥದಲ್ಲಿ ಸಾಧಾರವಾಗಿ ಹೇಳಿದ ಸಂಗತಿ ಇದು. ತನ್ನ ಇಪ್ಪತ್ತು ವರ್ಷಗಳ (ಕ್ರಿ. ಶೆ. ೭೯೨ . ೮೧೨) ರಾಜ್ಯಭಾರದಲ್ಲಿ ಹಿಮವತ್ಪರ್ವತದಿಂದ ತೆಂಕಣ ಲಂಕಾಂತವಾದ ಅಖಂಡ ಭಾರತಭೂಮಿ, ಜಗತ್ತುಂಗ ಗೋವಿಂದ

UL © © 6) ತ್ರಿ ಹೆ CG ಭ್ರ

Rashtrakutas and their times, Govinda 111 P. 8. 59-71,

ಹು

ರಾಜನ ಅಂಕಿತದೊಳಗೆ ಅಡಕವಾಗಿತ್ತೆಂಬುದು ವಿಶದವಾಗಿದೆ. ರಾಷ್ಟ್ರಕೂಟರು ಅಚ್ಚಗನ್ನಡಿಗರೇ ಎಂಬುದನ್ನೂ ಅವರು ಒಪ್ಪಿದ್ದಾರೆ. ಅದಕ್ಕಿಂತ ಕೆಲಗಾಲಕ್ಕೆ ಹಿಂದಿನ ವರೆಗೆ, ರಾಷ್ಟ್ರಕೂಟ ವಂಶೀಯರು ಜನ್ಮತಃ ಮರಾಠಿಯೇ ಮನೆಮಾತಾ ಗಿದ್ದವರು ಎಂದು ಕೆಲಮಂದಿ ವಾದಿಸುತ್ತಿದ್ದ ಸ್ಥಿತಿ ಇಂದು ಉಳಿದಿಲ್ಲ. ಕನ್ನಡ ಸಾಹಿತ್ಯವು ಎಂದಿಗೂ ಮರೆಯಲಾರದ ನೃಪತುಂಗದೇವನ ಕನ್ನಡ ಭಾಷಾ ಭಕ್ತಿ ಹಾಗಿರಲಿ, ಗುಜರಾಥ ಪ್ರಾಂತದಲ್ಲಿ ಉಪರಾಜಧಾನಿಯನ್ನೆಸಗಿಕೊಂಡಿದ್ದ, ಅವನ ಚಿಕ್ಕಪ್ಪ ಕರ್ಕರಾಜ - ಸುವರ್ಣವರ್ಷ (ಕ್ರಿ. ಶೆ. ೮೧೨) ಮೊದಲಾದವರ ಅನೇಕ ಶಾಸನಗಳು ಆಯಾ ಪ್ರಾಂತಗಳಲ್ಲಿ ಸಿಕ್ಕಿವೆ; ಶಾಸನಗಳು ಸಂಸ್ಕೃತ ಭಾಷೆಯಲ್ಲಿದ್ದರೂ ಶಾಸನಕಾರರಾದ ಅರಸರ ಹೆಸರು ಕನ್ನಡದಲ್ಲಿ ಇರು ವುದು ಕಂಡುಬಂದಿದೆ. *ಸ್ವಹಸ್ತೋಯಂ ಮಮ ಶ್ರೀ *ಕರ್ಕರಾಜಸ್ಯ ಶ್ರೀಮದಿಂದ್ರರಾಜಸುತಸ್ಯ” ಎಂಬುದು ಒಂದು ದೃಷ್ಟಾಂತವಾದರೆ ಕ್ರಿ.ಶ. ೮೮೪ರ ವರೆಗೆ ವಂಶೀಯರಾದ ಹಲ ಮಂದಿ ರಾಜರ ಅಂಥ ಶಾಸನ ದೃಷ್ಟ್ರಾಂತಗಳೂ ಈಗ ದೊರೆತಿವೆ. ಈಚೆಗೆ ಗೋಕಾಕಿನಲ್ಲಿ ರಾಷ್ಟ್ರಕೂಟ ದೆಜ್ಜಮಹಾರಾಜನ ೬. ೭ನೆಯ ಶತಮಾನದ ಕನ್ನಡ ಲಿಪಿಯ ಶಾಸನವೊಂದು ದೊರಕಿದೆ ಎಂಬುದು ಮೇಲಿನ ಹೇಳಿಕೆಗೆ ಮತ್ತಿಷ್ಟು ಸಾಧಕವಾಗಿದೆ. ಹದಕ್ಕಿಳಿದ ಹಿಟ್ಟನ್ನು ಇನ್ನೂ ಹಿಸುಕುವುದು ಅನಾವಶ್ಯಕ. ಕುಲದವರ ಲಾಂಛನವಾಗಿ ನೇಗಿಲು - ಗರುಡ ಮುದ್ರೆಗಳು ಇದ್ದಂತೆ ಕಂಡುಬರುತ್ತಿವೆ. ನೇಗಿಲಿನಿಂದ ಒಕ್ಕಲುತನದವರೆಂದು ಭಾವಿಸಿದರೆ, ಗರುಡ ಚಿಹ್ನೆಯಿಂದ ಶ್ರೀ ಕೃಷ್ಣನ ವಂಶೀಯರೆಂದು ರಾ. ಕೂಟ ನಂಶದ ೂಹಿಸಬಹುದು. ಯಾದವಾನ್ನಯದೊಳಗೆ ಬಲಭದ್ರ- ನಾ ಪಾನ (ಕ್ಷಷ್ಟರೆಂದರೆ ಪ್ರಖಾ $ಗೊಂಡವರು ಮೊದಲಿನ ವಂಶ ಚಿತ್ರವೂ RS * ವನಿಗೆ ನೇಗಿಲಿನ ಆಕಾರದ ಆಯುಧವಾದರೆ ಮತ್ತಿನನನು ಗರುಡಧ್ಯಜನು ಲೋಕಪ್ರಸಿದ್ಧರಾದ ಬಲಭದ್ರಕೃಷ್ಣರು ನಿಜವಾಗಿ ಯಾದವಾ ನ್ವಯದವರಾದರೂ ಗೊಲ್ಲರೊಡನಾಡಿ ಗೋವಳರೆಂದೇ ಪ್ರಸಿದ್ದಿ ಗೊಂಡವರಲ್ಲವೆ? ಅದರಿಂದ ಮತ್ತಿನ ಪ್ರಾಬಲ್ಯಕ್ಕೇರಿದೆ ಗೊಲ್ಲ ಅಥವಾ ಆಭೀರ ವಂಶೀಯರು ತಾವು ಯಾದವ ವಂಶೀಯರೆನ್ನುವುದೂ, ಪುರಾಣ ಪ್ರಸಿದ್ಧ ರಾದ ಆಯಾ *ಪ್ರಬುದ್ಧ ಕರ್ಣಾಟಕ ೨೦, ಫ್ರಿ, ೮ಎ (ಶ್ರೀ. ಎನ್‌. ಲಕ್ಷ್ಮೀನಾರಾಯಣ ರಾಯರು ಬರೆದ (ಮಾಲ್‌ಖೇಡಿನ ರಾಷ್ಟ್ರಕೂಟರು ಎಲ್ಲಿಯವರು” ಎಂಬ ಲೇಖನ,

ಸಾ

ವಿಶಿಷ್ಟ ವ್ಯಕ್ತಿಗಳ ಧ್ವಜಗಳನ್ನು ಧರಿಸಿಕೊಳ್ಳುವುದೂ ಸ್ವಾಭಾವಿಕವಾಗಿಯೇ ಬಂದುದು. ಪುರಾತನ ಕಾಲದಲ್ಲಿ ವಿಂಧ್ಯಾದ್ರಿಯಿಂದುಕ್ಕಿ ಹರಿದ ರೇವಾ - ಗೋದಾವರಿಗಳೆ ಮೊದಲಾದ ಪುಣ್ಯ ವಾಹಿನಿಗಳ ತೀರಗಳಲ್ಲಿ ರಸಿಕರೂ ವೀರರೂ ಆದ ಆಭೀರ (ಗೊಲ್ಲ) ಅನವಧಿ ಸಂತಾನಗಳು ವಾಸಿಸುತ್ತಿದ್ದುವು ಎಂಬುದು ಸುಮಾರು ಕಿ. ಶ. ೧-೨ನೇ ಶತಮಾನದ ಕುಂತಳಾಧಿಪತಿ ಶಾತನಾಹನನ ಅಲ್ಲವೆ ಸಾಲರಾಯನ ಆಸ್ಥಾನದಲ್ಲಿ ರಚಿತವಾದ *"ಗಾಥಾ ಸಪ್ತಶತಿ” ಎಂಬ ಪ್ರಾಕೃತ ಗೃಂಥದಿಂದ ಗೊತ್ತಾಗುತ್ತಿದೆ. ಕ್ರಿ. ಶ. ನಾಲ್ಕನೆ ಶತಕದ ಆದಿಯಲ್ಲಿ, ನಾಸಿಕ- ಖಂಡೇಶ ಗನಿಗಳೊಳಗೆ ದೊರಕಿದ ಶಾಸನ ದೊಳಗೆ ದಮರೀ - ಶಿವದತ್ತರೆಂಬ ದಂಪತಿಗಳ ಪುತ್ರನಾದ ವೀರಸೇನ - ಆಭೀರ ಎಂಬವನ ಆಳಿಕೆಯ ವಿಚಾರ ಉಪಲಬ್ಬವಾಗಿದೆ. ಆಭೀರ ವಂಶವೇ ಮುಂದೆ ಮೇಲ್ಮೆಗೇರಿ ಯಾದವ ವಂಶ ಮತ್ತು ರಾಷ್ಟ್ರಕೂಟ ವಂಶ ಎಂಬ ಹೆಸರನ್ನೊಂದಿರಬಹುದು ಎಂದು ತೋರುತ್ತಿದೆ. ರಾಜವಂಶದ ಚರಿತ್ರವನ್ನು ಆಮೂಲಾಗ್ರವಾಗಿ ವಿಸ್ತರಿಸುವುದು ಪ್ರಕೃತದ ಗುರಿಯಲ್ಲ. ಕವಿರಾಜಮಾರ್ಗಕ್ಕೆ ಆಸರೆಯಾದ ನೃಪತುಂಗನ ಮತ್ತು ಮಾನ್ಯಖೇಟ - ಆಸ್ಥಾನದ ವಿಚಾರವನ್ನು ಸಾಧ್ಯವಾದಷ್ಟು ಅರಿತುಕೊಳ್ಳುವುದೇ ನಮ್ಮ ಉದ್ದೇಶವು. ಸಂದರ್ಭದಲ್ಲಿ ನೃಸತುಂಗನಿಗಿಂತಲೂ ಹಿಂದಿನ ಕೆಲಮಂದಿ ರಾಜರ ಸಾಮಾನ್ಯ ನಿಚಾರವು ಆವಶ್ಯಕನಾಗುತ್ತಿದೆ. ಮೊತ್ತಮೊದಲು ವಂಶಭಾಗದ ಚಿತ್ರವೊಂದನ್ನು ಮುಂಡೆ ಸಮರ್ಪಿಸುವ:

ಮುಂದಿನ ವಂಶಶಾಖಾ ಚಿತ್ರದೊಳಗೆ ಗುಜರಾತ ಪ್ರಾಂತದ ಶಾಖೆಯ ಪ್ರಧಾನ ವ್ಯಕ್ತಿಗಳನ್ನು ಸಂಖ್ಯಾಪೂರ್ವಕವಾಗಿ ಕಾಣಿಸಿಲ್ಲ. ಅದೇ ರೀತಿಯಲ್ಲಿ ಶುಭತುಂಗ ಕೃಷ್ಣನ ಪ್ರಥಮ ಪುತ್ರನಾದ ಎರಡನೆ ಗೋವಿಂದನ ಹೆಸರನ್ನೂ ಅಂಕಿಸಿಲ್ಲ. ಗುಜರಾತ ಶಾಖೆಯವರ ವಿಚಾರ ನಮಗಿಲ್ಲಿ ಹೆಚ್ಚಿನ ಆವಶ್ಯಕವಿಲ್ಲವೆಂದಾದರೆ, ಎರಡನೆ ಗೋವಿಂದನ ಸಂಗತಿಯ ಅಧಿಕಾಂಶವೇನೂ ವರೆಗೆ ಗೊತ್ತಾಗಿಲ್ಲ ಎನ್ನಬಹುದು. ನಮಗಿಲ್ಲಿ ಚರಿತ್ರೆಗೆ ಅತ್ಯಾವಶ್ಯಕವಾದುವೆಂದರೆ ದಂತಿದುರ್ಗ-

Durgaprasad & 2878811188: (Ed:-) Gathasaptha-Shathi by Shathavahana. + Early History of the Dekkhan P, 46, or Collected works of Sir R. G. Bhandarkar vol. III, P. 68.

ಆದಿಯ ಐವರ ಸಾಮಾನ್ಯ ಪರಿಚಯ

೧೦.

ರಾ. ಕೂಟಿವಂಶ ಪ್ರಮುಖಾಂಶದ ಚಿತ್ರ*

೧. ದಂತಿವರ್ಮ ರ್ಕಿ ಇಂದ್ರ I ೩4. ಗೋವಿಂದ Y

೪, ಕರ್ಕ ] (ರಟ್ಟ)

ಇಂದ್ರ 11 (ರಾಷ್ಟ್ರಕೂಟ) ೭. ಕೃಷ್ಣ (ಅಕಾಲ ವರ್ಷ ಶುಭತುಂಗ)

ದಂತಿದುರ್ಗ (ಕ್ರಿ. ಶ. ೭೪೭ ೭೫೪)

ಗೋವಿಂದ 11 (ಕ್ರಿ.ಶ. ೭೮೩) ೮. ಥ್ರುವ- ನಿರುಪಮ

ಗೋವಿಂದ 111 ಜಗತ್ತುಂಗ (ಪ್ರಭೂತ ನರ್ಷ) ಕರ್ಕ ಇಂದ

ಶರ್ವ-ನೃಪತುಂಗ (ಅಮೋಘ ವರ್ಷ I) ಕರ್ಕ (ಕೃಷ್ಣ) ಗೋವಿಂದ (ಕ್ರಿ. ಶೆ. ೮೧೪ ೮೭ ೭) (ಕ್ರಿ. ಶ. ೪೦೨) (ಗುಜರಾತಿನ ಶಾಖೆ)

* Collected works of Sir R. ೮, Bhandarkar Vol ]11 8. 108,

ಸ, ೫. ಸಜಾೂ

ಶುಭತುಂಗ ಕೃಷ್ಣ- ಧ್ರುವ ನಿರುಪಮ - ಮೂರನೆ ಗೋವಿಂದ- ನೃಪತುಂಗ ಎಂಬ ಐದು ಮಂದಿಯ ವಿಚಾರಗಳು. ಆದರೂ ಆದಿಯ ದಂತಿವರ್ಮನಿಂದ ಎರಡನೆ ಇಂದ್ರರಾಜ ಪರ್ಯಂತದ ಐವರ ಹೊಲಬುಗಳೆನ್ನೂ ಮೇಲಿಂದ ಮೇಲೆ ಪರಿಶೀಲಿಸಬೇಕಾಗಿದೆ. ದಂತಿದುರ್ಗನಿಂದ ಹಿಂದಣವರ ಕಾಲ ದೇಶ ಗಳೆರಡೂ ವರೆಗೆ ಸ್ಬು ಟವಾಗಿ ಗೊತ್ತಾಗಿಲ್ಲ. ಆದರೇನು, ಸಹೇತುಕವಾದ ಅನುಮಾನವೂ ್ರೈಮಾಣವೇ ಅಲ್ಲವೆ?

ಮೇಲೆ ಚಚ ಚಿತ್ರದಲ್ಲಿ ಆದಿಯ ಐವರ ಕಾಲವೂ ತೋರು ವುದಿಲ್ಲ. ಆರನೆಯವನಾದ ದಂತಿದುರ್ಗನದು ತೋರುತ್ತಿದೆ. ಈತನ ತಂದೆ ಎರಡನೆಯ ಇಂದ್ರರಾಜನ ಹೆಸರಿನ ಮುಂಬದಿಯಲ್ಲಿ ರಾಷ್ಟ್ರಕೂಟ ಎಂದು ಕಂಸದೊಳಗೆ ತೋರಿದರೂ, ರಾಷ್ಟ್ರಕೂಟ- ರಾಜ್ಯವನ್ನು ಸ್ಫಾಪಿಸಿದಾತನು ಮಗ ದಂತಿಗನೇ ಎಂದು ಶಾಸನಾದಿಗಳಿಂದ ವಿಶದವಾಗುತ್ತಿದೆ. ಗೊತ್ತಾ ದಂತೆ, ಈತನ ರಾಜ್ಯ ಭಾರವೆಂಬುದು ಏಳೆಂಟು ವರ್ಷ. ಇವನ ರಾಜಧಾನಿ ಯಾವುದು ಎಲ್ಲಿ ಟ್‌ ಹೊಲಬು ಇನ್ನೂ ಸಂದೇಹತರಂಗಗಳಲ್ಲೆ ತೇಲಾಡುತ್ತಿದೆ. ಹಾಗಿದ್ದರೂ ಕಾಲಮಾನದ ಸೂಚನೆಯೊಂದು ಮುಂದೆ ದೃಸಾಂಕಿಸುವ ವರೆಗೆ ಲಭಿಸಿದ ಒಂದೇ ಒಂದಾದ ಸಾಮನ್‌ಗಡ ಎಂಬಲ್ಲಿಯ ಇವನ ಶಾಸನದ ಭಾಗದಿಂದ ಗೊತ್ತಾಗುತ್ತಿದೆ. ಶಾಸನಾಂಶ ವದು ಹೀಗಿದೆ;-

*“ಸಚ ಪೃಥ್ವೀವಲ್ಲಭ ಮಹಾರಾಜಾಧಿರಾಜಪರಮೇಶ್ವರ ಪರಮಭಟ್ಟಾ

ರಕ ಖಡ್ಗಾವಲೋಕ ಸ್ರೀಡಂತಿದುರ್ಗರಾಜದೇವಃ ಸರ್ವಾನೇವ ರಾಷ್ಟ್ರ ಪತಿ ವಿಷಯಪತಿ ಗ್ರಾಮಕೂಟಾನ್‌ ಯಥಾರ್ಹಪ್ರತಿಪತ್ತ್ರ್ಯಾಂಜ್ಞಾಪ

ಟೂ ಜ| ವ್ಯಂ psa ಮಾತಾಪಿತ್ರೋ ರಾತ್ಮನಶ್ಚ ಪುಣ ್ಯಯಶೋಭಿವೃದ್ಧ ಯೇ ಕೊಪ್ಳಾರ ಪಂಚಶತಭುಕ್ತ ತರ್ಗತ ಕರಂದೀವಡೆ ಜಪಿತದೆ ಳುವಾಡಗ್ರಾ ಸರಾ?

ಶಾಸನಾವಸರದಲ್ಲಿ ಶಾಲಿವಾಹನ ಕ! ೬೭೫ ವತ್ಸರ

‘Sources of Karnataka History’ by S. Shrikanta Shastri Page 58 Published by the Mysore Univerxity 1940

- & =

ಗಳು-ಎಂದರೆ ಕ್ರಿ. ಶ. ೭೫೩ ಕಳೆದು ಹೋಗಿ ಕ್ರಿ. ಶ. ೭೫೪ನೆಯ ವರ್ಷ ನಡೆಯುತ್ತಿತ್ತೆಂದು ಮೇಲಿನ ಹೇಳಿಕೆಯಲ್ಲಿ ವ್ಯಕ್ತವಾಗುವುದು. ಮತ್ತೆ ಬಹುಕಾಲ ದಂತಿದುರ್ಗನು ಆಳುತ್ತಿದ್ದಂತೆ ತೋರುವುದಿಲ್ಲ. ಸ್ವಲ್ಪವೇ ಕಾಲದಲ್ಲಿ ಆತನ ಚಿಕ್ಕಪ್ಪನಾದ ಶುಭತುಂಗ ಕೃಷ್ಣರಾಜನು ಪಟ್ಟ ನನ್ನೇರಿದಂತೆ ಗೊತ್ತಾಗುತ್ತಿದೆ. ದಂತಿದುರ್ಗನು ಕ್ರಿ. ೭೪೭ರಲ್ಲಿ ಕನ್ನಡ ಚಕ್ರವರ್ತಿ ಯಾಗಿದ್ದ ಚಾಲುಕ್ಯ ಕೀರ್ತಿವರ್ಮನನ್ನು ಗೆದ್ದು ದಕ್ಷಿಣ ಚಕ್ರವರ್ತಿ ಎನಿಸಿ ದುದೂ ತಿಳಿದುಬಂದಿದೆ. ಅವನ ಆಳಿಕೆಯ ಕಾಲಮಾನಗಳನ್ನೇ ಮೇಲಿನ ವಂಶ ಚಿತ್ರದಲ್ಲಿ (ಕ್ರಿ. ಶ. ೭೪೭-೭೫೩) ಎಂದು ಕಾಣಿಸಿದುದು. ತಲೆ ಮಾರಿಗೆ ಸರಾಸರಿಯಾಗಿ ೨೫ರಂತೆ ವರ್ಷ ಗಣನೆ ಮಾಡುವುದು ಚಾರಿತ್ರಿಕರ ಪದ್ಧತಿಯಷ್ಟೆ. ಅದಕ್ಕನುವಾಗಿ ಅವನಿಂದ ಹಿಂದಿನ ಐವರ ಕಾಲವನ್ನು ಲೆಕ್ಕಿಸಿದಲ್ಲಿ ಆದಿಯವನಾದ ದಂತಿವರ್ಮನು ಸುಮಾರು ಕ್ರಿ. ಶೆ. ೬೨೨ರ ಹಿಂದು ಮುಂದಿ ನಲ್ಲಿ ಹುಟ್ಟಿರಬೇಕೆಂಬುದು ನಿಶ್ಚಯ. ಕಾಲವೆಂದರೆ ಕನ್ನಡಿಗರ ಕೀರ್ತಿಗೆ ಕಣ್ಮಣಿ ಎನ್ನಿಸಿದ ಚಾಲುಕ್ಯ ಕುಲದ ಎರಡನೆ ಪುಲಿಕೇಶಿ ಮಹಾರಾಜನು (*ಕ್ರಿ. ಶ. ೬೧೦-೬೩೪) ಬಾದಾಮಿಯ ಪಟ್ಟವನ್ನೇರಿ ಕನ್ನಡವನ್ನು ಮಾತ್ರವೇ ಅಲ್ಲ, ಇಡೀ ದಕ್ಷಿಣಾಪಥವನ್ನೇ ತನ್ನ ಅಂಕೆಯಲ್ಲಿಟ್ಟು ಆಳುತ್ತಿದ್ದ ಕಾಲ, ಸಂದರ್ಭದಲ್ಲೇ ವಿಂಧ್ಯಾದುತ್ತರ ಭಾಗದ ಚಕ್ರಾಧೀಶನಾಗಿದ್ದ ಹರ್ಷ ವರ್ಧನನು ದಕ್ಷಿಣಕ್ಕೆ ದಾಳಿವರಿದು ರೇವಾನದಿಯ ದಂಡೆಯಲ್ಲಿ ಸಸ್ಯನ್ಯನಾಗಿ ಹೋರಾಡಿ ಪುಲಿಕೇಶಿಯಿಂದ ಪರಾಜಿತನಾಗಿ ಹಿಂಜರಿದುದು. ಪೂರ್ವೋಕ್ತ ದಂತಿವರ್ಮನು ಹಾಗೆ ಕ್ರಿ. ಶ. ೬೨೨ರ ಸಂದಿನಲ್ಲಿ ಹುಟ್ಟಿ ಬಳೆದರೆ, ಅವನ ಮಗ ಒಂದನೆ ಇಂದ್ರನು ಕ್ರಿ. ಶ. ಸು. ೬೪೭ರ ಸಂದರ್ಭದಲ್ಲಿ ಉದಯಿಸಿರ ಬೇಕು. ಆಗ ಇಡೀ ಕರ್ನಾಟಕಾಧೀಶ್ವರನೆಂದರೆ ಪುಲಿಕೇಶಿ ಮಹಾರಾಜನ ದ್ವಿತೀಯ ಪುತ್ರನಾದ ಚಾಲುಕ್ಯ ವಂಶದ ಒಂದನೆ ವಿಕ್ರಮಾದಿತ್ಯನು. ಆತನು ಬಾದಾಮಿಯ ಪಟ್ಟವನ್ನೇರಿ ಕ್ರಿ. ಶ. ೬೩೪ರಿಂದ ೬೮೦ರ ವರೆಗೆ ಆಳಿದವನು. ಮೇಲೆ ಸೂಚಿಸಿದ ಒಂದನೆ ಇಂದ್ರನೂ ಆತನ ಮಗ ಒಂದನೆ ಗೋವಿಂದನೂ ಚಾಲುಕ್ಯ ವಿಕ್ರಮನ ಕಾಲದಲ್ಲೆ ಬಾಳುತ್ತಿದ್ದವರು. ವಿಕ್ರಮಾದಿತ್ಯನು, ತಂದೆಯಾದ ಪುಲಿಕೇಶಿಯಂತೆಯೇ ಪ್ರಬಲ ಪ್ರತಾಪಿ

Early History of the Dekkan Printed at Government Central Press 1884. - Page 46,

ww $

ಯಾದುದರಿಂದ, ಪರಾಕ್ರಮಿಗಳಾಗಿರಬಹುದಾದರೂ ಮೇಲೆ ಸೂಚಿಸಿದ ಇಂದ್ರ - ಗೋವಿಂದ ರಾಜರಿಗೆ ಅವನನ್ನು ಮಿರಿ ಸ್ವತಂತ್ರಾಧಿಕಾರವನ್ನು ಸ್ಥಾಪಿಸುವುದು ಅಸಾಧ್ಯವಾಗಿರಬೇಕು. ಇಂದ್ರ-ಗೋವಿಂದರಿಬ್ಬರ ಜೀವನ ಕಾಲವು ಸುಮಾರು ಕ್ರಿ. ಶ. ೬೯೭ರ ವರೆಗೆ ಸಾಗಿರಬಹುದು. ಆಗ ಕನ್ನಡ ಚಕ್ರಾಧೀಶನಾಗಿದ್ದ ಅರಸನೆಂದರೆ, ಹಿಂದೆಂದ ಚಾಲುಕ್ಯ ಒಂದನೆ ವಿಕ್ರಮಾದಿತ್ಯನ ಮಗ ವಿನಯಾದಿತ್ಯನು (ಕ್ರಿ. ಶ. ೬೫೦-೬೯೭). ಹಿಂದೆ ಸೂಚಿಸಿದ ಗೋವಿಂದ ರಾಜನ ಕುಮಾರನು ಒಂದನೆ ಕಕ್ಕರಾಜನು. ಅವನಿಗೇ 'ರಟ್ಟ' ಎಂಬ ನಾಮಾಂತರವೆಂಬುದು ಅದೇ ವಂಶೀಯನೂ ಪ್ರಖ್ಯಾತಿ ಗೊಂಡವನೂ ಆದ ಅಕಾಲವರ್ಷ ಕೃಷ್ಣ (ಕನ್ನರ) ರಾಜನ ಕರಹಾಡ ಶಾಸನದ ಮುಂದಿನ ಹೇಳಿಕೆಯಿಂದ ಸಿದ್ದವಾಗುತ್ತಿದೆ: *“ಶ್ರಿತಿಕಲತಿಲಕಸ್ತದನ್ವಯೇ ಕೃತರಿಪುದಂತಿ ಘಟೋಜನಿಷ್ಟ ರಟ್ಟ: | ತಮನುಚ ಸುತರಾಷ್ಟ್ರಕೂಟನಾಮ್ನಾ ಭುವಿ ವಿದಿತೋಜನಿ ರಾಷ್ಟ್ರ ಕೂಟ ವಂಶಃ (೭) ಭೂತಲಕ್ಕೂ ಅದರಂತೆ ವಂಶಕ್ಕೂ ತಿಲಕ ಪ್ರಾಯನಾದ ಹಗೆಗಳೆಂಬ ಆನೆಗಳನ್ನು ನಾಶಿಸಿದ ರಟ್ಟನು ಜನಿಸಿದನು. ಅವನ "ರಟ್ಟ'ನಾಮವೂ, ವಿಶೇಷ ವಾಗಿ ಅವನ ಮಗ ಇಂದ್ರರಾಜನ «ರಾಷ್ಟ್ರಕೂಟ ಎಂಬ ಬಿರುದೂ ವಂಶದ "ರಾಷ್ಟ್ರಕೂಟ' ಎಂಬ ಹೆಸರಿಗೆ ಕಾರಣವಾಯಿತು. ಇದರಿಂದ, ರಟ್ಟ - ರಾಷ್ಟ್ರಕೂಟರು ತಂದೆಮಕ್ಕಳೆಂಬುದು ವಿದಿತವಾಗು ತ್ತಿದೆ. ರಟ್ಟ - ರಾಷ್ಟ್ರಕೂಟರೆಂಬ ವಿಶಿಷ್ಟ ನಾಮಗಳವರೆಂದರೆ ಬೇರೆ ಯಾರೂ ಅಲ್ಲ; ಕ್ರಮವಾಗಿ ಹಿಂದೆ ಸೂಚಿಸಿದ ಒಂದನೆ ಗೋವಿಂದನ ಮಗನಾದ ಕಕ್ಕರಾಜನೂ ಮತ್ತು ತತ್ರುತ್ರನಾದ ಎರಡನೆ ಇಂದ್ರರಾಜನೂ ಎಂಬುದು ಮೇಲೆ ಸೂಚಿಸಿದ ದಂತಿದುರ್ಗನ ಸಾಮುನ್‌ಗಡದ ಶಾಸನಾಂಶದಿಂದಲೂ ಗೊತ್ತಾಗುತ್ತಿದೆ. “ಶ್ರೀ ಕಕ್ಕರಾಜ ಇತಿ ಗೋತ್ರಮಣಿರ್ಬಭೂವ” ಎಂದು ರಟ್ಟನ ಹುಟ್ಟನ್ನೂ ಮುಂದೆ “ಅಭೂತ್ತನೂಜಃ ಸದ್ರಾಷ್ಟ್ರಕೂಟ ಕನಕಾದ್ರಿ ರಿವೇಂದ್ರರಾಜಃ” ಎಂದು ಆತನ ಪುತ್ರ ಇಂದ್ರರಾಜನ ಜನನವನ್ನೂ ಸೂಚಿಸಿ ದ್ದಾನೆ. ಕಾಲದಲ್ಲಿ ಕ್ರಮವಾಗಿ ಬಾದಾಮಿಯ ಪಟ್ಟಾರೂಢರಾಗಿದ್ದ ಚಾಲುಕ್ಕ ರಾಜರೆಂದರೆ, ಹಿಂದೆ ಸೂಚಿಸಿದ ವಿನಯಾದಿತ್ಯನ ಕುಮಾರಕನಾದ Collected works of Dr. R. G. Bhandarkar ಐ. 281 A.d, 1927,

es

ವಿಜಯಾದಿತ್ಯ (ಕ್ರಿ. ಶ. ೬೯೭ ೭೩೩) ಅವನ ಪುತ್ರನಾದ ವಿಕ್ರಮಾದಿತ್ಯ (ಕ್ರಿ. ಶ. ಬಾಟಾ ಎಂಬವರು. ಬಾದಾಮಿವಂಶವ ಚಲುಕ್ಕರಾಜರೊಳೆಗನ ರಾಜರಿಬ್ಬರೆಂದರೆ ತಮ್ಮ ಪೂರ್ವಜರಂತೆ ಅತಿ ಪರಾಕ್ರಮಿಗಳೆನ್ನಿಸಿದವರಲ್ಲ. ಆದರೆ ಹಿಂದೆಂದ ರಟ್ಟರಾಷ್ಟ್ರಕೂಟರು ತಮ್ಮ ಪೂರ್ವಜರಿಗಿಂತಲೂ ಅಧಿಕಾಧಿಕವಾಗಿ ಹುರುಪೇರುತ್ತಾ ಬಂದವರು. ಇಂದ್ರರಾಜನು ಚಾಳುಕ್ಯ ನೃಪಾತ್ಮಜೆಯನ್ನು ರಾಕ್ಷಸಿ: ವಿವಾಹದಿಂದ ವರಿಸಿದನೆಂದಾ ಸಂಜನ ಬ. ಸಾರುತ್ತ ಡೇ

'ಇಂದ್ರರಾಜಸ್ತತೊಗ್ಳಹ್ಹಾತ್‌ ಯಸ್ಟಾಲುಕ್ಯನೃಪಾತ್ಮಜಾಂ |

ರಾಕ್ಷಿಸೇನ ವಿವಾಹೇನ ರಣೇ ಖೇಟಕ ಮಂಡಪೇ 4

ಹೇಳಿಕೆ, ಹಿಂದೆ ಸೂಚಿಸಿದ ದಂತಿದುರ್ಗನ ಸಾಮನ್‌ಗಡದ ಶಾಸನ ದೊಳಗಿನ «ರಾಜ್ಞೀ ಸೋಮಾನ್ಪಯೂ ತಸ್ಯ ವಿತೃತಶ್ಚ ಸಳುಕ್ಯಚಾ' ಎಂಬ ವ್ಯಕ್ತ ಸೂಚನೆಗೂ ಸರಿಯಾಗುತ್ತಿದೆ. ಚಾಲುಕ್ತನ್ಸ ಪಾತ್ಮಜೆಯಾದ ರಾಣಿಯಲ್ಲಿ ಇಂದ್ರರಾಜನಿಗೆ ಜನಿಸಿದ ನಿನರಕುಮಾರನೇ ಸಾಮನ್‌ಗಡದ ಶಾಸನವನ್ನು ಬರೆಯಿಸಿದ ದಂತಿಗನು. ರಾಣಿಯ ಹೆಸರು ನಿರ್ದಿಷ್ಟವಾಗಿಲ್ಲ. ಕಾಲಮಾನ ವನ್ನು ಭಾವಿಸಿದರೆ ಮೇಲೆ ನಿರ್ದೇಶಿಸಿದ ಚಾಲುಕ್ಯ ರಾಜರೂಳಗೆ ಕಡೆಯವನಾದ ವಿಕ್ರಮಾದಿತ್ಯನ ತಂಗಿಯನ್ನೋ ಮಗಳನ್ನೋ ಚೆ ಇಂದ್ರರಾಜನು ರಾಕ್ಷಸೀ ವಿವಾಹದಲ್ಲಿ ವರಿಸಿದುದೆಂದು ಭಾವಿಸಬೇಕು.

ಇದರಿಂದ, ಎರಡನೆಯ ಇಂದ್ರರಾಜನು, ಆಗಿನ ಚಾಲುಕ್ಕ್ಯಾಧಿಕಾರ ವನ್ನು ಮಾರಿ ನಡೆಯಲಾರಂಭಿಸಿದುದು ವೃಕ್ತವಾಗುತ್ತಿದೆ, ಅವನ ಮಗನೆ ದಂತಿದುರ್ಗನು. ಆತನು, ಆಗಿನ ಚಾಲುಕ್ಯರಾಜನಾದ, ಹಿಂದೆ ತೋರುವ ವಿಕ್ರಮಾದಿತ್ಯನ ಮಗ *ರ್ತಿವರ್ಮನ (ಕ್ರಿ, ಶ. ೭೪೭ -೭೫೩) ರಾಜ್ಯಾಧಿ ಕಾರವನ್ನು ಸಳೆದು ಕೊಂಡುದಲ್ಲದೆ ಅವನ ಕುವ ನರಿಯನ್ನೂ ಪಠಿಸಿದನಂಬುದು ಗೊತ್ತಾಗಿದೆ. ಹಿಂದೆ ರಾಷ್ಟ್ರಕೂಟ ವಂಶ ಚಿತ್ರವನ್ನು ಕೊಟ್ಟಿದ್ದೇವೆಯಷ್ಟ. ವಂಶದ ಆದಿಯ ವ್ಯಕ್ತಿಗಳಿಗೂ ಚಾಲುಕ್ಯವಂಶದವರಿಗೂ ಇರುವ ಸಂಬಂಧ ಗಳನ್ನು ಇನ್ನ ಷ್ಟು ವಿಶದವಾಗಿ ಭಾವಿಸಿಕೊ ಇಳ್ಳಲೆಂ ದು ಎರಡನೆ ಪುಲಿಕೇಶಿ ಮೊದ ಲ್ಲೊಂಡು ಕಡೆಯ ಕೀರ್ತಿವರ್ಮನ ಪರ್ಯಂತದ ಬಾದಾಮಿ ಚಾಳುಕ್ಯರ ವಂಶ ಚಿತ್ರವನ್ನೂ ಮುಂದೆ ಅಂಕಿಸುತ್ತೇವೆ:-

2

ಆ)

Sanjan 80170೧04 of Amoghavarsha I Saka Samvat ೭೯ಷ್ಟಿ (A. D. ೬71)

ಮು. "ಭ್ಯ ಬಾದಾಮಿಯ ಚಾಲುಕ್ಯ ವಂಶದ ಕಡೆಯ ಭಾಗ

೧. * ಸತ್ಯಾಶ್ರಯ ಪುಲಿಕೇತಿ 11 ಶಾ. ಶ. ೫ನ ೨-೫೫೬ (ಈ; ಶ್ರ ೬೧೦-೬4೪) |

೨. ವಿಕ್ರಮಾದಿತ್ಯ 1ಶಾ.ಶ.ಖ೫೫೬-೬೦೨ (ಕ್ರಿ. ಶೆ. ೬ಫಿ೪-೬೮೦) 4. ವಿನಯಾದಿತ್ಯ ಶಾ. ಶ. ೬೦೨-೬೧೪ (ಕ್ರಿ. ಶ. ೬೮೦-೬೯೭) ೪. ವಿಜಯಾದಿತ್ಯ ಶಾ. ಶ. ೬೧೯-೬೫೫ (ಕ. ಶ. ೬೯೭-೭೩೩) ೫. ವಿಕ್ರಮಾದಿತ್ಯ ಶಾ. ಶ. ೬೫೫-೬೬೯ (ಕ್ರಿ. ಶ. ೭4೩-೭೪೭)

೬. ಕೀರ್ತಿವರ್ಮನ್‌ ಶಾ.ಶ. ೬೬೯ (ಕ್ರಿ. ಶ. ೭೪೭) ಮೇಲೆ ಸಂಗ್ರಹವಾಗಿ ಸೂಚಿಸಿದ ರಾಷ್ಟ್ರಕೂಟ ವಂಶದ ಮೂಲ ಪುರುಷ ಮೊದಲಿನ ದಂತಿವರ್ಮ ಜಟಕಾ ಮೂವರಿಗೆ ರಾಷ್ಟ್ರಕೂಟ ಎಂಬ ಹೆಸರಿನ ಛಾಯೆಯಾದರೂ ಆಗಿನ ಕಾಲದಲ್ಲಿ ಇತ್ತೋ ಇಲ್ಲವೋ ಎಂದು ಸಂಶಯ ವಾಗುತ್ತಿದೆ. ವಿಂಧ್ಯಾದ್ರಿಯ ರೇವಾ ನದಿಯ ತಟಪ್ರದೇಶ ಗಳಲ್ಲಿ ' ಆದಿಯಿಂದಲೂ ಮನೆಮಾಡಿಕೊಂಡು ಹುಟ್ಟು ಗನ್ನ ಡಿಗರಾದ ಗೊಲ್ಲರಿದ್ದ ಮಿರಿ ಸಿದ್ದಿ ಗೊಂಡ ಸಂಗತಿ. ಅದೇ ವಂಶಕ್ಕೆ ಸೇರಿದ್ದ ಕ್ರಮೇಣ ಒಂದಷ್ಟು ಲೆ ವಡೆದ ರಾಜವಂಶದ ಶಾಖೆಯೊಂದಕ್ಕೆ "ಆಭೀರ ವಂಶೆ' ಎಂಬ ಹೆಸರಾಗಿತ್ತು... ರಾಷ್ಟ್ರಕೂಟ ವಂಶದ ಹಿಂದಿನ ವರು ಆಭೀರ ವಂಶದ ರಾಜರೆಂದೇ ನಮಗೆ ಭಾಸವಾಗುತ್ತಿದೆ. ನಾಲ್ಕನೆ ಯವನಾದ ಕಕ್ಕನಿಗಿದ್ದ ಬಿರುದು ರಟ್ಟ ಎಂದಲ್ಲದೆ ರಾಷ್ಟ್ರಕೂಟ ಎಂದಲ್ಲ.

ಜ್ಟ್ರ ರಟ್ಟ (ಕಕ್ಕ) ರಾಜ 'ಮಗನಾದ ಇಂದ್ರನನ ನ್ನು ಬಣ್ಣಸುವಲ್ಲಿ ಸಾಮನ್‌ ಗಡದ

ಕಾಟಾ ಪ್ರಯೋಗಿಸಿದ “ಸದ್ರಾಷ್ಟ್ರಕೂಟ ಕನ ಕಾ ೀಂದ್ರರಾಜಃ?” ಎಂಬ ಪವವೈಶಿಷ್ಟ್ಯವನ್ನು ಭಾವಿಸಿರಿ. ಇದಕ್ಕೆ ರಾಷ್ಟ್ರಕೂಟ ವಂಶರೂಪದ ಕನಕಾದ್ರಿ (ಮೇರು ಪರ್ವತ) ಯಂತೆ ಇಂದ್ರರಾಜನಿದ್ದ ನು ಎಂಬ ಅರ್ಥವಾಗು ತ್ತಿದೆ. "ರಟ್ಟ? ಎಂಬ ದೇಸಿ ಪದವನ್ನೆ "ರಾಷ್ಟ್ರ ವನ್ನಾಗಿ ಸಂಸ್ಕೃತಕ್ಕೆ ಮಾರ್ಪ

ಡಿಸಿಕೊಂಡುದಲ್ಲದೆ, ಅದು a; ಸಂಸ್ಕೃತವಲ್ಲ ಎಂಬುದನ್ನೂ ಮರೆಯ

ರಟ್ಟ-ರಾ ಪೃಕೂಟರು

Early History of the Dekkan, Printed in Government Central Press 1884. - Paged46.

೬. ಗಹಿ

ಲಾಗದು- ರಟ್ಟರ ಕೂಡು” ಅಥವಾ ರಟ್ಟರ ಕೂಡಲ್‌? (ರಟ್ಟರ ಕೂಟಿ) ಎಂಬ ಪದನದು ಸಂಸ್ಕೃತೀಕೃತವಾಗಿ ರಾಷ್ಟ್ರಕೂಟ ಎಂದಾಗಿದೆ. ಇದ ರಿಂದ, ಇಂದ್ರರಾಜನು ಬರಿಯ «ರಾಷ್ಟ್ರಕೂಟ'ನಷ್ಟೇ ಅಲ್ಲ; ಅಂಥ ಅನೇಕ ಕೂಟ (ಶಿಖರ) ಗಳಿಗಾಶ್ರಯವಾದ ರಾಷ್ಟ್ರಕೂಟ-ಕನಕಾದ್ರಿ ಎಂದಾಗುತ್ತಿದೆ. ಇಂದ್ರರಾಜನು ರಟ್ಟರ ಭಿನ್ನಭಿನ್ನ ಸೇನಾಸಮುದಾಯಗಳಿಂದ ಕೂಡಿ ಬಲಿಷ್ಕನಾದವನು ಎಂದು ತಾತ್ಪರ್ಯ. ಇಂದ್ರನು ದಂತಿದುರ್ಗನ ತಂದೆಯೇ ಆದುದರಿಂದ ಶಾಸನಕಾರನಿಗೆ ಅವನ ಯೋಗ್ಯತೆ ವಿಶದವಾಗಿ ತಿಳಿದಿರ ಬೇಕು. ಇಂದ್ರರಾಜನ ತಂದೆ ಬರಿಯ ರಟ್ಟನಾಗಿದ್ದನು;, ಮಗನಂತೆ (ರಾಷ್ಟ್ರಕೂಟ ಪದವಿಯನ್ನೊಂದಿರಲಿಲ್ಲ. ರಟ್ಟ ಎಂದರೆ ಬಲಿಷ್ಠವಾದ ಬಾಹು ಮೂಲ ಎಂಬರ್ಥವಿದೆ. ಅದಕ್ಕನುವಾಗಿ ರಟ್ಟ ಎಂದರೆ ದಾಂಡಿಗ (ಬಲಿಷ್ಕ) ಎಂಬ ಅರ್ಥವೂ ಒದಗಬಹುದು. ಮಾತ್ರವಲ್ಲ, ರಟ್ಟ ಪದವು ಲಟ್ಟ ಎಂದೂ ಅಲ್ಲಲ್ಲಿ ಉಪಯುಕ್ತವಾಗಿದೆ. ಲಟ್ಟರು, ಅಥವಾ ಹಿಂದಣ ರಾಷ್ಟ್ರಕೂಟರು ಮಾನ್ಯ ಖೇಟ ರಾಜಧಾನಿಗಿಂತ ಮೊದಲಿದ್ದುದು “ಲಟ್ಟ ಲೂರ ನಗರ”ದಲ್ಲಿ ಎಂದು ಮೊದಲೊಮ್ಮೆ «ಕನ್ನಡ ಪರಿಷತ್ರತ್ರಿಕೆ'ಯಲ್ಲಿ ಸಾಧಾರವಾಗಿ ಸೂಚಿತವಾಗಿದೆ. ಹೇಗೂ ಇರಲಿ, "ರಟ್ಟ' ಎಂಬ ಪದವೇ «ರಾಷ್ಟ್ರಕೂಟ? ಪದಕ್ಕೆ ಆಶ್ರಯವೆಂಬಲ್ಲಿ ಸಂಶಯವಿಲ್ಲ. ಒಂದು ವೇಳೆ ನಿಜವಾಗಿ ರಾಷ್ಟ್ರಕೂಟ ವಂಶವನ್ನು ಸ್ಥಾ ಪಿಸಿದವನು ದಂತಿದುರ್ಗನೇ ಆಗಿದ್ದಿರಬಹುದಾದರೂ “ರಾಷ್ಟ್ರ ಕೂಟ ಕನಕಾದ್ರಿ” ಎಂದು ತನ್ನ ತಂದೆಯಾದ ಇಂದ್ರರಾಜನನ್ನು ಬಣ್ಣಿಸಿದುದು ವೀರ ಕುಮಾರನಾದ ದಂತಿಗನ ಪಿತೃಭಕ್ತಿಗೆ ತಕ್ಕ ಗುಣವೇ ಸರಿ.

ರಾಷ್ಟ್ರಕೂಟ - ತ್ರಿಮೂರ್ತಿಗಳು

ರಾಷ್ಟ್ರಕೂಟ ಕುಲದ ತ್ರಿಮೂರ್ತಿಗಳೆಂದು ನಾವು ಹೆಸರಿಸುವುದು ಕ್ರಮವಾಗಿ ದಂತಿದುರ್ಗ - ಶುಭತುಂಗ ಕೃಷ್ಣರಾಜ- ನಿರುಪಮ ಧ್ರುವರನ್ನು. ಹಿಂದೆ ಸೂಚಿಸಿದ ಸಾಮನ್‌ಗಡದ ಶಾಸನದಲ್ಲಿ *“ಯೋ

ದಂತಿದುರ್ಗನೂ ಡ್‌ ವಲ್ಲಭಂ ಸಪದಿ ದಂಡಕಲೇನ ಜಿತ್ವಾ ರಾಜಾಧಿರಾಜ ರಾಜಧಾನಿಯೂ ಪರಮೇಶ್ವರತಾಮವಾಪ” ಎಂದುತೋರುತ್ತಿದೆ. ಇಲ್ಲಿ ತೋರುವಂತೆ ದಂತಿದುರ್ಗನು ಗೆದ್ದ "ವಲ್ಲಭ'ನೆಂದರೆ, ವರೆಗೆ ಪರಂಪರಾಯಾತ ರೀತಿಗನುವಾಗಿ ಕನ್ನಡದಲ್ಲಿ ರಾಜಾಧಿರಾಜನಾಗಿದ್ದ ಚಾಲುಕ್ಯ ಕೀರ್ತಿವರ್ಮನೇ ಆಗಿದ್ದಿರಬೇಕೆಂದು ಭಾವಿಸಲೇಬೇಕು. ಅವನನ್ನು ಗೆದ್ದುದರಿಂದಲೆ ದಂತಿದುರ್ಗನು ರಾಜಾಧಿರಾಜ ಪರಮೇಶ್ವರ ಎಂಬ ಬಿರುದಿಗೆ ಪಾತ್ರನಾಗಿರಬೇಕು, ಕೀರ್ತಿವರ್ಮನು ಪಟ್ಟವನ್ನೇರಿದುದು ಕ್ರಿ. ಶ. ೭೪೭ರಲ್ಲಾದರೆ ದಂತಿದುರ್ಗನ ಶಾಸನ ಕಾಲ ಕ್ರಿ. ಶ. ೭೫೪. ಅದರಿಂದ, ದಂತಿಗನು ಕೀರ್ತಿವರ್ಮನನ್ನು «ದಂಡದಿಂದ ಗೆದ್ದ ನಿರ್ದಿಷ್ಟ ಸಮಯದ ಗುರಿ ಸರಿಯಾಗಿ ಗೊತ್ತಾಗದಿದ್ದರೂ, ಅದು ಪೂರ್ವೋಕ್ತ ಉಭಯ ಕಾಲ ಗಳ ಅಂತರದಲ್ಲಿ ಎಂಬಲ್ಲಿ ಸಂಶಯವಿಲ್ಲ. ತಂದೆಯಾದ ಇಂದ್ರ ರಾಜನು ಚಾಲುಕ್ಯ ರಾಜ ಪುತ್ರಿಯನ್ನು ರಾಕ್ಟಸೀ ವಿವಾಹದಿಂದ ವರಿಸಿದರೆ, ಮಗನಾದ ದಂತಿಗನು ಜಿತನಾದ ಚಾಲುಕ್ಯ ಕೀರ್ತಿವರ್ಮನ ಕುಮಾರಿಯನ್ನು ವರಿಸಿದ್ದನೆಂಬುದು ನಿಶ್ಚಿತವಾಗಿದೆ. ಕೀರ್ತಿವರ್ಮನು ಎರಡನೆ ಪುಲಿಕೇಶಿ ಯಿಂದ ಸ್ಥಾಪಿತವಾದ ಬಾದಾಮಿಯ ರಾಜಧಾನಿಯಲ್ಲಾಳುತ್ತಿದ್ದನಷ್ಟ. ಗೆದ್ದ ವನಾದರೂ ದಂತಿದುರ್ಗನು, ತನಗೆ ಮಾವನಾದ ಕೀರ್ಕಿವರ್ಮನನ್ನು ರಾಜ ಧಾನಿಯಿಂದ ಹೊರಡಿಸಲಿಲ್ಲ. ಅದು ವೀರಜಾಮಾತನ ವಿನಯಕ್ಕೊಪ್ಪುವ ಗುಣವೇ ಎನ್ನುವ. ಮಾತ್ರವಲ್ಲ, ತಂದೆಯಾದ ಇಂದ್ರನು ಚಾಲುಕ್ಯರನ್ನು ವಿರೋಧಿಸುತ್ತಲೆ ಇದ್ದರೆ ಮಗನಾದ ರಾಜಾಧಿರಾಜ ದಂತಿಗನು ಚಾಲುಕ್ಯರ ಪ್ರೀತಿಯನ್ನು ಬಯಸುತ್ತಿದ್ದನೆಂಬುದು ಇದರಿಂದ ಗೊತ್ತಾಗುತ್ತಿದೆ, ರಾಷ್ಟ್ರ

Sources of Karnataka History Page 58.

ಎಂಬ ಶ್ಲೋಕ ಭಾಗವನ್ನು ಪರಾಂಬರಿಸಿರಿ.. ಸಮುದ್ರಮಥನಕ್ಕೆ ಪ್ರಮುಖ ಸೂತ್ರಧಾರಿ ಎಂದರೆ ಶ್ರೀ ವಿಷ್ಣುವೇ ಅಲ್ಲವೆ? ಹಾಗೆ ತನ್ನ ತಂದೆಯಾದ ಬಾ » ಕಸ ಗಿ ಮಾಡಿದೆ ತೀ ವಿಷು ವನ್ನು ಲಕಿ

) ನೂ ವಿ

EE ರಾಜಕುಮಾರಿ (ಸ್ರಯಮೆವ ಲಕ್ಷ್ಮೀಃ ಶೆಂಖಚಕ್ರ ಕರ ಲಾಂಛನನಾದ ದಂತಿದುರ್ಗನನ್ನು; ಸ್ಪಯಂವರಿಸಿದಳು. ಕುಮಾರಿಯ ಹೆಸರು ಲಕ್ಕಿ ವಾದುದು ಎಂಬುದಿನ್ನೊಂದ್ಕು ಹೀಗೆ ಎರಡು ವಿಷಯಗಳು ಹೇಳಿಕೆಯಿಂದ

ಧ್ವನಿತವಾಗುತ್ತಿವೆ. ಅಂತೂ ದಂತಿದುರ್ಗನು ಕೀರ್ತಿವರ್ಮನನ್ನು ಗೆದ್ದು,

ತಂದೆಯಂತೆ ರಾಕ ವಿವಾಹಕ್ಕೆ ಫೆನೀಣಿದವನಲ. ಅದನಂದಲೇ ಮೇಲೆ ಎಫ

ದೇವಿ ಎಂಬುದೊಂದು, ವಿವಾಹವೆಂದರೆ ಪ್ರೇಮಬದ

ನಿ ಸೂಚಿಸಿದಂತೆ ಚಚ

L

(೭೬ & <1 (J, ಮೆ Kl ೯೦ ( 38 CC CL ಇಲಿ “ನ ದು ಫ್‌

ದಂತೆ ತೋರುತ್ತಿದೆ. ಅವನದೇ: ಆದ ಸಾಮನ್‌ಗಡ

“ಕಾಂಚೀಶ ಕೇರಳನರಾಧಿಪ ಚೋಳ ವಾಂಡ್ಯ ಶ್ರೀ ಹರ್ಷವಜ್ರಟವಿಭೇದ ವಿಧಾನದಕ್ಸಂ | ಕರ್ನಾಟಕಂಬಲಮಜಚಿಂತ

ದಂತಿದುರ್ಗನಿಂದ ಸ್ಪಾವಿತವಾದ (ಕರ್ಣಾಟಕಂಬಲ' ವ್ರ ಹೆಗೆಗಳ ನಾಚ ಮಾರಿದ.ದೂ ಗಣಕರ ಲಕ್ಕಕ್ಕೆ ಸಿಕದ:ದೂ ಆಗಿತ್ತಂತೆ... ಲದಿಂದಲೇ ಆತನು ಕಾಂಚಿ ಕೇರಳ ಜೋಳ ಪಾಂಡ್ಯ ರೆಂಬ ದಕ್ಷಿಣ ರಾಜ ed , ಶ್ರೀ ಹರ್ಷವಜ್ರಟಿರಿಂಬ ಔತ್ತರೇಯರನ್ನೂ ಸಂಸ್ರಟದೊಳಿಗಟ್ಟು ದಂತೆ.

4

ಶಾಸನದಲ್ಲಿ ದಂತಿದುರ್ಗನ ದಕ್ಷಿಣದೇಶ ವಿಜಯವೇನೋ ಸೂಚಿತವಾಗು ತ್ತಿದೆ. ಆದರ್ರಿ ಅದಕ್ಕಿಂತಲೂ ಹೆಚ್ಚಿನ ವಿಶಿಷ್ಟಾರ್ಥದಾಯಕವಾಗಿ, ಮೇಲೆ ಸೂಚಿಸಿದ ರಾ. ಕೂಟ ಕೃಷ್ಣನ (ಕನ್ನರನ) ನವಸಾರಿಯ ಶಾಸನ ಭಾಗದಲ್ಲಿ

ಇದೇ ಸಂಗತಿ ಸಿರ್ದಿಷ್ಟವಾಗಿದೆ: ಔತ

Collected works of Sir R, ೮, Bhandarkar Vol III Page 322 A.D. 1927.

- ೧೩

ಕೃತ್ವಾಸ್ಪದಂ ಹೃದಯಹಾರಿ ಜಘನ್ಯದೇಶೇ ಸ್ವೈರಂ ಪುನರ್ಮ್ಮದು ನಿಮದನ್ಯಚ ಮಧ್ಯದೇಶೇ ಯಸ್ಯಾಸಮಸ್ಯ ಸಮರೇ ವಸುಧಾಂಗ

ಕಾಂಚಿ: ಪದೇ ಪದಮಕಾರಿ ಕರಣ ಭೂಯಃ

ಇಲ್ಲಿ ಭೂನಿಯನ್ನೇ ನಾಯಿಕೆಯನ್ನಾಗಿಯೂ ದಂತಿದುರ್ಗನನ್ನೇ ವರ್ಣನೆ ಚಾರಿತ್ರಿಕ ವಿಮರ್ಶಕರಿಗೆ ಅನಾವಶ್ರಕ. ಆದರೆ ಸರಿಯಾಗುವಂತೆ ಇಲ್ಲಿ ಸೂಚಿಸಿದ, ನಸುಧಾಂಗನೆಯನ್ನೊಂದಿ ಉಪಯುಕ್ತ ಗಳಾದ ಜಸು ಡೆ ದೇಶ ಕಾಲ ವದ ಎಬ ಹವಗ

ದುರ್ಗನು ತನ್ನ ಹೃದಯವನ್ನು ಸಸಿನ ಸುದಿನ ಚೊ *ಜಘನ್ಯ ದೇಶದಲ್ಲಿ ನೆಲೆಗೊ ನಎಂಡನಂತೆ,

+ ಮಧ್ಯದೇಶದಲ್ಲಿ soe

ಗ್ಗ ಜಯ

ಕವಿಯ ಶ್ರಂಗಾರ ವರ್ಣನೆಯನ ಪ್ರದೇಶಗಳನ್ನೂ, ವರೆಗೆ ಚಾರಿ

kp ರಾಜಧಾನಿಯಾಗಿ ಮಾಡಿಕೊಂಡ ಭೂಭಾಗನಿದ್ದ "ಜಘನ್ಯದೇಶ' ಎಂದರೆ ಯಾನವುನು? ಎಂಬುದನ್ನು ಪರಾಂಬರಿಸುವ. ಜಘನೃದೇಶ ಎಂದೆರೆ ಮಧ್ಯ ಭಾಗದಿಂದ ಚಾ ಕೆಳಗಿನ ಜಘನ

ವಂ “ಚಂಡ

* ಸಘನ್ಯ ದೇಶ - (೧) ಪುರಾತನ ಕಾಲದ ಆರ್ಯರಿಂದ ನೀಚ ದೇಶವಾಗಿ ಭಾವಿಸಲ್ಪಡುತ್ತಿದ ವಿಂಧ್ಯಾದಕ್ಸಿಣ ಭಾಗದ ದೇಶ. (೨) ನಿತಂಬ ಸಂಬದ್ಧವಾದ ಸ್ಥಾನ. |

+ ಮಧ್ಯದೇಶ (೧) ಹಿಮವದ್‌ ವಿಂಧೈಗಳೆ ಮಧ್ಯಭಾಗ. (೨) ಶರೀರ ಮಧ್ಯಭಾಗ.

*ಕಾಂಚೀಪದ - (೧) ದ್ರಾವಿಡ ದೇಶಗತವಾದ ಕಾಂಚೀದೇಶ (೨) ಮೇಖಲೆ ಅಥವಾ ಡಾಬಿಗೆ ಆಶ್ರಯವಾದ ಸೊಂಟ,

ಆ. ಗಿಲಿ;

ಅಥವಾ ನಿತಂಬ ಪ್ರದೇಶವೆಂಬ ಅರ್ಥವು. ನಿತಂಬ ಎಂದರೆ ಪರ್ವತದ ತಪ್ಪಲು ಎಂದೂ ಅರ್ಥವಿದೆ. ಆದ್ದರಿಂದ ವಿಂಧ್ಯಾದ್ರಿಯ ತಪ್ಪಲನ್ನೆ ಮನಸ್ಸಿ ನಲ್ಲಿರಿಸಿಕೊಂಡು ಶಾಸನ ಕನಿ ಹಾಗೆ ಬರೆದಿರಬೇಕು. ಸಂದರ್ಭದಲ್ಲಿ "ಜಘನ್ಯದೇಶೇ' ಎಂಬುದಕ್ಕೆ ಬದಲಾಗಿ *"ನಿತಂಬದೇಶೇ' ಎಂದು ಮಾರ್ಪಡಿಸು ತ್ರಿದ್ದರೆ ಇನ್ನಷ್ಟು ವಿಶದವಾಗಿ ಉಭಯಾರ್ಥಗಳೂ ಭಾಸವಾಗುತ್ತಿದ್ದುವಲ್ಲವೇ ಎಂದು ಕೇಳಬಹುದು. ಹೌದು; ಆದರೆ ಪೌರಾಣಿಕ ರೂಢಿಗನುವಾಗಿ ಬಂದ, ವಿಂಧ್ಯದಿಂದ ತೆಂಕಣ ಭಾಗವು ಮ್ಲೇಚ್ಛ (ಜಘನ್ಯ) ಪ್ರದೇಶ ಎಂಬ ಭಾವನೆ “ನಿತಂಬ ಪದದಿಂದ ಒದಗಲಾರದು. ಶಾಸನ ಕಾಲವೆಂದರೆ ಪೌರಾಣಿಕ ವಿಚಾರಕ್ಕೆ ಹೆಚ್ಚಿನ ಪ್ರವಣತೆಯನ್ನೀಯುತ್ತಿದ್ದ ಕಾಲವಲ್ಲವೆ? ಅದರಿಂದಲೇ ಕವಿ ಜಘನ್ಯ ಪದವನ್ನೇ ಉಪಯೋಗಿಸಿರಬೇಕು. ವಿವೇಚನೆ ಗನುವಾಗಿ ಪರಾಂಬರಿಸಿದಲ್ಲಿ “ಕೃತ್ತಾಸ್ವದಂ ಹೃದಯಹಾರಿಜಜಘನ್ಯದೇಶೇ” ಎಂಬ ಭಾಗಕ್ಕೆ ದಂತಿದುರ್ಗನ ಆಳಿಕೆಗೆ ಆಸ್ಪದವಾದ ರಾಜಧಾನಿ, ವಿಂಧ್ಯಾದ್ರಿಯ ತಪ್ಪಲಿನಲ್ಲೇ ಇದ್ದಿರಬೇಕೆಂದು ತೋರುತ್ತಿದೆ. ಅಷ್ಟೇ ಅಲ್ಲ; ಹಿಂದೆ ಸೂಚಿಸಿದ ದಂತಿದುರ್ಗನ ಸಾಮನ್‌ಗಡದ ಶಾಸನದೊಳಗಿನ ಇನ್ನೊಂದು ಶ್ಲೋಕ ವನ್ನೀಕ್ಸಿಸಿರಿ:-

+ಮಹೀ ಮಹಾನದೀರೇವಾರೋಧೋ ಭಿತ್ತಿವಿದಾರಣಂ |

ಲೋಕಾ ವಿಲೋಕಯಂತ್ಯುಚ್ಚೆ 4: ಕೃತಂಯಜ್ಞ್ಜಯಕುಂಜರೈ:

ದಂತಿದುರ್ಗನ ವಿಜಯ ಯಾತ್ರಾವಸರದಲ್ಲಿ ದಂತಿಗಳಿಂದ ಮಾಡಲ್ರಡುವ ಜಲಕ್ರೀಡೆಯನ್ನು ಬಣ್ಣಿಸುವ ಶ್ಲೋಕವಿದು. ಇಲ್ಲಿ ತೋರುವ ಮಹೀ-ಮಹಾ ನದೀ-ರೇವಾ (ನರ್ಮದಾ ನದಿ) ಎಂಬವುಗಳೊಳಗೆ ಮೊದಲಿನದು ಮಾಳವ ದೇಶದ ಪ್ರಾಂತಕ್ಕೆ ಹೊದ್ದಿಕೆಯಾಗಿ ಉಳಿದುವು ಒಂದಿಷ್ಟು ಮೂಡಣ ಪ್ರಾಂತಕ್ಕೆ ಸೇರಿ, ವಿಂಧ್ಯಪರ್ವತದ ಸಾಲಿನಿಂದಲೇ ಉಕ್ಕಿ ಹರಿವವುಗಳು ಎಂಬುದನ್ನು ಮರೆಯಬಾರದು. ಮೇಲೆಯೇ ಅವನು (ಚಾಲುಕ್ಯ) ವಲ್ಲಭನನ್ನು ಜಯಿಸಿ "ರಾಜಾಧಿರಾಜ ಪರಮೇಶ್ವರ”? ಎಂಬ ಬಿರುದನ್ನು ಪಡೆದಂತೆ ವರ್ಣಿತ ವಾದುದು. ವಿಂಧ್ಯಾದ್ರಿಯ ನಿತಂಬ ಪ್ರದೇಶದಲ್ಲಿದ್ದ ತನ್ನ ರಾಜಧಾನಿಯಿಂದ ಸೇನಾಸಮೇತನಾಗಿ ಹೊರಟು ಚಾಲುಕ್ಯ ಕೀರ್ತಿವರ್ಮನ ಬಾದಾಮಿ ರಾಜ

*ನಿತಂಬ (೧) ಪರ್ವತದ ತಪ್ಪಲು (೨) ಉಬ್ಬಿದ ನಿತಂಬ ಭಾಗ.

+Sources of Karnataka History Page 57

- ೧೫ -

ಧಾನಿಯತ್ತ ಹರಿವಲ್ಲಿ ನದಿಗಳನ್ನು ದಾಟಿಕೊಂಡೇ ಬರಬೇಕಾಗುತ್ತಿದೆ ಎಂಬು ದನ್ನು ಭಾವಿಸಿಕೊಳ್ಳಬೇಕು. ಮಾನ್ಯ ಖೇಟಕ್ಕಿಂತ ಹಿಂದಿನ ರಾಷ್ಟ್ರಕೂಟರ ರಾಜ ಧಾನಿಯಾವುದಾಗಿತ್ತು ಎಂಬುದರ ವಿವೇಚನೆ ಇಷ್ಟರಿಂದಲೆ ನಿರ್ಧಾರವಾಗು ವಂತಿಲ್ಲ. ಆದರೆ ಅದರ ಗುರಿಯನ್ನು ಸರಿಯಾಗಿ ಮುಂಡೆ ಕಂಡುಹಿಡಿ ಯುವುದಕ್ಕೆ ಇದೊಂದು ಪೀಠಿಕೆ ಎಂದು ಮಾತ್ರವೆ ಭಾವಿಸಬೇಕು. ದಂತಿದುರ್ಗನು ಕ್ರಿ. ಶ. ೭೫೪ರ ವರೆಗೆ ಆಳುತ್ತಿದ್ದುದು ಅದೇ ವರ್ಷ ದಲ್ಲಿ ನೆಲೆಗೊಂಡ ಅವನ ಸಾಮನ್‌ಗಡದ ಶಾಸನದಿಂದ, ತಿಳಿದುಬರುತ್ತಿದೆ. ಆದರೆ ಅನನು ಸ್ಪರ್ಗಂಗತನಾದ, ಮತ್ತು ಶುಭತುಂಗ ಕೃಷ್ಣರಾಜನು ಪಟ್ಟವನ್ನೇರಿದ ನಿರ್ದಿಷ್ಟ ಕಾಲವಾವುದು ಎಂದು ಇನ್ನೂ ಗೊತ್ತಾಗಿಲ್ಲ. ಅದರಂತೆ, ಶುಭತುಂಗ ಕೃಷ್ಣನು ಆಳಿದ ಕಾಲಾವಧಿಯೂ ವಿಶದವಾಗಲಿಲ್ಲ. ಆದರೆ ಶುಭತುಂಗ ಕೃಷ್ಣನು ದಂತಿದುರ್ಗನ ಮಗನಲ್ಲ, ಸಹೋದರನೂ ಅಲ್ಲ. ಅವನ ಚಿಕ್ಕಪ್ಪ ನೆಂಬುದು ಮೇಲೆ ಕಾಣಿಸಿದ ನವಸಾರಿಯ ಶಾಸನಭಾಗದಿಂದ ವ್ಯಕ್ತವಾಗಿದೆ. “ತತ್ರಾಭವತ್‌ ಪರಮಧಾಮ್ನಿ ಪದೇ ಪಿತೃವ್ಯಃ ಶ್ರೀ ಕೃಷ್ಣ ರಾಜನೃಪತಿ;” ಎಂಬುದೇ ಶಾಸನಾಂಶವು. «ಪಿತೃವ್ಯಃ? ಎಂದರೆ ಚಿಕ್ಕಪ್ಪ ಎಂಬಲ್ಲಿ ಸಂದೇಹವಿಲ್ಲವಷ್ಟೆ ಕೃಷ್ಣರಾಜನೆಂದರೆ ಹಿಂದೆ ತೋರುವ ಕರ್ಕ (ರಟ್ಟ)ರಾಜನ ಎರಡನೆಯ ಮಗನು; ದಂತಿದುರ್ಗನ ತಂದೆಯಾದ ಇಂದ್ರರಾಜನ ತಮ್ಮನು ಎಂದು ಸೂಚಿತವಾಗುತ್ತಿದೆ. ಇದರಿಂದ ದಂತಿದುರ್ಗನಿಗೆ ರಾಜ್ಯಭಾರ ಸಮರ್ಥ ನಾಗಿದ್ದ ಮಗನಾಗಲಿ ಸೋದರನಾಗಲಿ ಇದ್ದಿಲ್ಲವೆಂದೂ ಭಾಸವಾಗುತ್ತಿದೆ. ಇಂಥ ಉಚ್ಛಾಧಿಕಾರ ಪ್ರಾಪ್ತಿಯ ಸಂದಿನಲ್ಲಿ ಕೆಲಕೆಲ ಸಂಚುಹೊಂಚು ಗಳ ಒಳಗೈಯ ಸುಳಿದಾಟವಾಗುವುದುಂಟಷ್ಟೆ. ಅವುಗಳ ಬಲದಿಂದ ದಂತಿ ದುರ್ಗನ ಮಗನೇ ಮೊದಲಾದವರ ಅಧಿಕಾರಕ್ಕೆ ತಿಲಾಂಜಲಿ ಒದಗಿರಬಹುದೇ ಎಂದು ಕೆಲವರು ಊಹಿಸಿದುದುಂಟು, ಆದರೆ ಅದು ಸಂಶೋಧನಸಾರ ಎಂದು ನಮಗೆ ತೋರುವುದಿಲ್ಲ. ಶುಭತುಂಗ ಕೃಷ್ಣನ ಪ್ರತಾಪದ ಮೇಲ್ಮೆ ಹಾಗಿರಲಿ; ದೈವಭಕ್ತಿ ವ್ಯಾವಹಾರಿಕ ಮಾರ್ಗ, ಇವೆಲ್ಲವೂ ಅವನ ನಡವಳಿ ಯಲ್ಲಿ ಅಚ್ಚೊತ್ತಿ ಲೋಕವನ್ನು ಆಕರ್ಷಿಸಿದ ಧಾರ್ಮಿಕ ಕ್ರಿಯಾಕಲಾಪಗಳು ಅಂಥ ಸಂಶಯವನ್ನೆಲ್ಲ ತೊಳೆದು ಒರಸಿ ಬಿಡುತ್ತಿವೆ. ಏಲೂರು ಅಲ್ಲವೆ ಏಲಾಪುರ ಎಂಬುದು, ಕನ್ನಡಿಗರ ಶಿಲ್ಪಕಲಾಮಹಿಮೆಗೆ - ವಿಶೇಷವಾಗಿ

ಅಕಾಲವರ್ಷ.-- ಕೃಷ್ಣ ರಾಜ

(ಗಿ ಸು

ಶುಭತುಂಗನ ಭಕ್ತಿ ಶೀಲಗಳಿಗೆ . ಆದರ್ಶವೆನ್ನಿಸಿ ಇಂದಿಗೂ ಹೊಳೆಯುತ್ತಿದೆ. ಅಲ್ಲಿ ಒಂದೇ ಬಂಡೆಗಲ್ಲಿನಲ್ಲಿ ಕೊರೆದ ಕೈಲಾಸ ಎಂಬ ದೇವಾಲಯವನ್ನು ಮಹಾರಾಜನೇ ಕಟ್ಟಿಸಿದಾತನು. ರಚನಾನಂತರದಲ್ಲಿ ದೇವಾಲಯದ ಗೈಮೆಯ ಜಾಹ್ಮೆ ಚೆಲುವಿನ ಮೇಲ್ಮೆ - ಸೊಂಪು ಗುಂಪುಗಳ ಬಲ್ಮೆಗಳನ್ನು ಪರಾಂಬರಿಸಿದ ಪ್ರಮುಖ ಶಿಲ್ರಿಯೇ ಬೆರಗಾಗಿ ಹೋದನಂತೆ. ಶುಭತುಂಗನ ಪ್ರತಾಪವನ್ನೆಲ್ಲ ನಾವಿಲ್ಲಿ ವಿಸ್ತರಿಸುವುದಿಲ್ಲ.. ಆತನ ರಾಜಧಾನಿ ಎಲ್ಲಿ ಇದ್ದಿರ ಬೇಕು ಎಂಬುದು ಇನಣ್ನ ಗೊತ್ತಾಗಲಿಲ್ಲ. ಮೇಲೆ ಸೂಚಿಸಿದ ಕೈಲಾಸ ದೇವಾಲಯಕ್ಕೆ ಆಸರೆಯಾದ ಏಲೋರವು, ಹಿಂದೆ ಕಾಣಿಸಿದ ಲಟ್ರಲೂರೆಂಬ ಲಿಗೆ ಅನತಿ ದೂರದಲ್ಲಿರುವಂತೆ ತಿಳಿದುಬರುತ್ತಿದೆ. ಶುಭತುಂಗನು ಸುಮಾರು *ತ್ರಿ, ಶ. ೭೭೫ ಕೈಂತಲೂ ಮೇಲೆ ರಾಜ್ಯವನ್ನಾಳುತ್ತಿದ್ದಂತೆ ಗೊತ್ತಾಗಿದೆ. ಅಕಾಲವರ್ಷ ಶುಭತುಂಗ ಕೃಷ್ಣನಿಗೆ ಗೋವಿಂದ-ಧ್ರುವರೆಂಬ ಇಬ್ಬರು

ಕುಮಾರಕರಿದ್ದರು. ಹಿರಿಯನಾಪ ಎರಡನೆ ಗೋವಿಂದನ ಆಳಿಕೆಯೇ ಮೊದಲಾದ ಚಾರಿತ್ರಿಕ ವಿಚಾರಗಳೆಲ್ಲ ಅಲ್ಲಿಂದಲ್ಲಿಗೆ ಸಂಪುಟದೊಳಗೇ ಅಣಗಿಸಿ

ಬಿಟ್ಟಂತೆ ತೋರುತಿ ಹೇಗೂ ಇರಲಿ, ತಂದೆಯ ಧ್ರುವ-ನಿರುಪನು ಮನ್ನಾ )

ವ್ರ + “ಜೈಷ್ಟೋಲ್ಲಂಘನ ಜಾತಯಾಪ್ಯಮಲಯಾ ಲಕ್ಷ್ಮ್ಯಾ ಸಮೇತೋಪಿ ಸನ್‌ ಯೋ ಭೂಸ್ನಿರ್ಮಲ ಮಂಡಲ ಸ್ಥಿತಿಯುತೋ ದೋಷಾ ಕೆರೋನಕ್ಷಚಿತ್‌”

೫% Collected works of R. G. Bhandarkar P.89 & The Rashtra- kutas & their times 9 45.

+Sourees of Karnataka History 2. 62.

“ಲಕ್ಷ್ಮೀದೇವಿ ತನ್ನ ಅಕ್ಕನಾದ ಜೈೇಷ್ಠೆ (ದಾರಿದ್ಯ ಲಕ್ಷ್ಮಿ )ಯನ್ನು ಉಲ್ಲಂಘಿಸಿ ದಾಕೆಯಾದರೂ ನಿರ್ಮಲ ಸ್ರಭಾವದಾಕೆ. ಥುವನು ಜ್ಯೇಷ್ಮನನ್ನು ಉಲ್ಲಂಘಿಸಿ ದರೂ ನಿರ್ಮಲ ಲಕ್ಷ್ಮೀಸಮೇಶನು. ಮತ್ತು ನಿರ್ಮಲ ಮಂಡಲ (೧. ಮಂಡಲ - ಸಾಮಂತಮಂಡಲ; ೨. ಮಂಡಲ ಚಂದ್ರಬಿಂಬ) ನಾದರೂ ದೋಷಾಕರ (೧. ದೋಷಯುತನು; ೨. ರಾತ್ರಿಯಲ್ಲಿ ಕಿರಣವುಳ್ಳ ಚಂದ್ರ.)

OS ಜಾ

ಶ್ಲೇಷಾಲಂಕಾರರಂಜಿತವಾದ ಪದ್ಯವಿದು ಧ್ರುವನು ತನ್ನ ಜ್ಯೇಷ್ಠ (ಅಣ್ಣ) ನಾದ ಗೋವಿಂದನನ್ನು ಉಲ್ಲಂಘಿಸಿದಾತನು ಎಂಬುದನ್ನು ಸೂಚಿಸುತ್ತಿದೆ. ಅಣ್ಣನನ್ನು ಹಾಗೆ ತಳ್ಳಿದುದು ನಿರುಪಮನ ಕೀರ್ತಿಗೆ ಕಳಂಕವಲ್ಲ ಎಂದು ಕಾಲದ ಶಾಸನಕಾರರು ವರ್ಣಿಸಿದರೂ ಈಗಿನ ಸಹೃದಯರು ಅದಕ್ಕೆ ಅಸ್ತುಗೊಡುವರೋ ಎಂಬಲ್ಲಿ ಸಂಶಯವಾಗುವುದು. ಆದರೆ ರಾಜ ಕುಮಾರರಿಬ್ಬರ ತಂದೆಯಾದ ಶುಭತುಂಗನು ಕೀರ್ತಿಶೇಷನಾದ ಸಮಯವದು. ವರೆಗೆ ರಾಷ್ಟ್ರಕೂಟರಿಂದ ಸೋತು ಸುಣ್ಣವಾದುದರಿಂದ ತಮಗೆ ಅನುಕೂಲ ಸಮಯದ ಛಿದ್ರವನ್ನು ಪ್ರತೀಕ್ಷಿಸುತ್ತಲೇ ಇದ್ದ ಚಾಳುಕ್ಯ ವಂಶೀಯರೇ ಮೊದಲಾದ ಮಾಂಡಳಿಕರು ಮೆಲ್ಲನೆ ಪ್ರಯೋಗಿಸುತ್ತಿದ್ದ ತಂತ್ರಕ್ಕೆ ಧ್ರುವನ ಅಣ್ಣನಾದ ಗೋವಿಂದನು ಸಿಲುಕಿರಲೂಬಹುದು. ಅದನ್ನು ಪರಾಂಬರಿಸಿದ ಧ್ರುವನು ಅಣ್ಣನನ್ನು ಉಲ್ಲಂಭಸಿದುದಾಗಿರಲೂಬಹುದು. ಇರಲಿ, ಧ್ರುವನ ಸಮರಾಂಗಣಸಾಹಸವೆಂಬುದು ಶಾಸನ ಪ್ರಸಿದ್ದವಾದ ಸಂಗತಿ. ಅವನು ವಿಂಧ್ಯಾದ್ದ ಕ್ಲಿಣದ ಅನೇಕಾನೇಕ ಪ್ರಾ ತಗಳ ಅರಸರನ್ನು ಗೆದ್ದುದಷ್ಟೇ ಅಲ್ಲ; ಉತ್ತರದ. ರಾಜರೊಳಗೆ ಹಲವರನ್ನು ಸೋಲಿಸಿದನು; *ಗೌಡರಾಜ್ಯ - ವತ್ಸ ರಾಜ್ಯ - ಮರು - ಮಧ್ಯದೇಶಗಳನ್ನು ಜಯಿಸಿದನೆಂಬುದೂ ವಿಸ್ಕೃತವಾಗಿದೆ. ನಿರುಪಮಧ್ರುವನು ಅಂಥ ಅಪ್ರತಿ ಪರಾಕ್ರಮಿ, ವಿಂಧ್ಯಾಚಲದ ದಕ್ಸಿ ಣೋತ್ತರ ಭೂಭಾಗಗಳನ್ನು ತನ್ನ ದಾಳಿಯಿಂದ ನಡುಗಿಸಿದಾತನು, ಎಂಬದನ್ನು ಒಪ್ಪಿಕೊಳ್ಳುವ, ಅದರಿಂದ, ಹಿಂದೆ ಸೋತು ಸೊರಗಿ ಹೋಗಿದ್ದ ಚಾಲುಕ್ಕ ವನಂಶದವರೊಳಗೆ ಒಬ್ಬನಾದ ಒಂದನೆ ಅರಿಕೇಸರಿ ಆತನನ್ನು ಹೇಗೆ ಅತಿಕ್ರಮಿಸಿ ದನು? ಸಂಗತಿ ಪಂಪಭಾರತದ ಪ್ರಥಮಾಶ್ವಾಸದಲ್ಲಿ ಹೀಗೆ ನಿರೂಪಿತವಾಗಿದೆ: ನಿರುಪಮದೇವನ ರಾಜ್ಯದೊ ಳರಿಕೇಸರಿ ವೆಂಗಿನಿಷಯಮಂತ್ರಿಕಳಿಂಗಂ ಬೆರಸೊತ್ತಿಕೊಂಡು ಗರ್ವದೆ ಬರೆಯಿಸಿದಂ ಪಸರನಖಿಳದಿಗ್ಳಿ ತ್ರಿಗಳೊಳ್‌ ೨೦ ೧. ನಿರುಸಮದೇವನೆಂದರೆ ರಾ. ಕೂಟ ಧ್ರುವನೇ ಎಂಬುದನ್ನು ರಾಜರೊಳಗಿನ ಕಾಲಮಾನಾದಿಗಳನ್ನು ಪರಾಮರ್ಶಿಸಿ ಕೈ. ವಾ. ಶ್ರೀ. ಕೆ. ಬಿ.

5006 Granto of Kambadeva- 5007068 of Karnataka History P, 62,

೧ಿಲೆ ಎ.

ಪಾಠಕರೇ ಮೊದಲಾದ ವಿದ್ವಾಂಸರು ಒಪ್ಪಿದ್ದಾರೆ. ಸಂಗತಿ ವಾಸ್ತವವೇ ಎನ್ನುವ. ಆದರೂ ಇದು ಧ್ರುವನ ನಿರುಪಮತಾಭಂಗವನ್ನೊದಗಿಸಲಾರದು. ಆತನು ತಂದೆಯ ಮರಣಾನಂತರ ಅಣ್ಣನ ಹಗೆತನಕ್ಕೂ ಆಸ್ಪದನಾಗಿ ರಾಷ್ಟ್ರ ಕೂಟ ರಾಜ್ಯವನ್ನು ಹರಡಿಸುತಿದ್ದ ಕಾಲವದು. ಒಂದೆಡೆ ಹೊಲಿವಲ್ಲಿ ಇನ್ನೊಂದೆಡೆ ಹರಿದುಹೋಗುವ ಅವಸ್ಥೆ ಹಳೆಯ ಬಟ್ಟಿಗೂ ಚಕ್ರಾಧಿಪತ್ಯಕ್ಕೂ ತಪ್ಪಿದುದಲ್ಲ. ಜಾಣನಾಗಿದ್ದ ಒಂದನೆ ಅರಿಕೇಸರಿ, ಧ್ರುವನ ಅಣ್ಣನಾದ ಗೋವಿಂದನ ನೆರವನ್ನು ಪಡೆದುಕೊಂಡಿರಲೂಬಹುದು; ಅಂತೂ ಸೆರೆ ನೋಡಿ ಉಳಿಹೊಡೆದು ಎಂದರೆ - ಧ್ರುವನು ನಾನಾ ಕಾರ್ಯಗಳಲ್ಲಿ ಪ್ರವೃತ್ತನಾಗಿರ ಬೇಕಾದ ಸಂದರ್ಭವನ್ನರಿತು, ಅವನು ಸ್ವಕಾರ್ಯವನ್ನು ಸಾಧಿಸಿಕೊಂಡಿರ ಬಹುದು. ಪದ್ಯದಲ್ಲಿ ಹೊಳೆಯುವ ಭಾವನೆಯನ್ನು ಪರಿಶೀಲಿಸಿರಿ: “ವೆಂಗಿ ವಿಷಯಮಂ. . . . ಒತ್ತಿಕೊಂಡು” ಎಂದಲ್ಲವೆ ಮಾತಿನ ಮಟ್ಟ? ಅವನು ನಿರುಪಮ ದೇವನ ರಾಜ್ಯದೊಳಗಿನ ವಿಶಿಷ್ಟ ಭಾಗವನ್ನು ಒತ್ತಿಕೊಂಡು ದಲ್ಲದೆ, ಮಹಾಪ್ರತಾಪಿಯನ್ನು ರಣರಂಗದಲ್ಲಿ ಇದಿರಿಸಿ ಗೆದ್ದು ಆಕ್ರಮಿಸಿದು ದಲ್ಲ. ನಡೆವಾತನು ಎಡಹುವಂತ್ಕೆ ವೀರನಾದವನಿಗೆ ಬಗೆಯ ಸೋಲವೂ ಸ್ವಾಭಾವಿಕವೇ ಸರಿ. ಈತನು ಆಳುತ್ತಿದ್ದ ರಾಜಧಾನಿ ಯಾವುದು ಎಂಬ ಗುಟ್ಟು ಇನನ ಹಿರಿಯರ ರಾಜಧಾನಿಯಂತೆ ಇನ್ನೂ ತೆರೆಯ ಮರೆಯಲ್ಲೇ ಇದೆ, ಆದರೂ ಹಿಂದಿನ ಇಬ್ಬರ ರಾಜಧಾನಿ ಎಲ್ಲಿ ಇದ್ದಿರಬಹುದು ಎಂಬುದನ್ನು ನಾವು ಸಾಧಾರವಾಗಿ ಊಹಿಸಿದಂತೆ ಈತನದನ್ನೂ ಪರಾಂಬರಿಸಲು ಆಧಾರ ವಿಲ್ಲವೆಂದಲ್ಲ. ಅದರೆ, ಅದನ್ನು ಈತನ ಮಗನಾದ ಜಗತ್ತುಂಗ ಗೋವಿಂದ ರಾಜನ ಚಾರಿತ್ರಿಕ ವಿವೇಚನಾವಸರದಲ್ಲಿ ಸೂಚಿಸುವುದೇ ಉತ್ತಮವೆಂದು ಭಾವಿಸುತ್ತೇವೆ. ಧ್ರುವನ ಆಳಿಕೆ ಸುಮಾರು ಕ್ರಿ. ಶ. ೭೯೨-೩ರ ವರೆಗೆ ಸಾಗಿರಬಹುದು.

ಪ್ರಭೂತನರ್ಷ- ಗೋವಿಂದ

ಕಾರಾರ್‌

ಅಕಾಲವರ್ಷ ಧ್ರುವನಿಗೆ ಗೋವಿಂದ - ಇಂದ್ರರೆಂಬ ಇಬ್ಬರು ಕುಮಾರ ರಿದ್ದಂತೆ ಹಿಂದಿನ ಚಾರಿತ್ರಿಕರಿಗೆ ತಿಳಿದುಬಂದ ಸಂಗತಿ. ಆದರೆ, ಇವರಲ್ಲದೆ ಕಂಬ *(ಸ್ತಂಭ - ರಣಾನಲೋಕ) ಕರ್ಕ (ಸುವರ್ಣವರ್ಷ)ರೆಂಬ ಮತ್ತಿಬ್ಬರು ಪುತ್ರರೂ ಇದ್ದಂತೆ ಇಂದಿನವರಿಗೆ ಸಾಧಾರವಾಗಿ ಗೊತ್ತಾ ಜಿ brace ಗಿದೆ. ರಣಾವಲೋಕ-ಕೆಂಬನೆಂದರೆ ಎಲ್ಲರಿಗೂ ಹಿರಿ ಪ್ರತಾಪಗಳು ಯನು. ಹೆಂತಿಯಲ್ಲಿ ಗೋವಿಂದನು ದ್ವಿತೀಯನೆನ್ನಿಸಿ ದಲ್ಲಿ ತೃತೀಯತೆ ಕರ್ಕನಿಗೊದಗಿ, ಇಂದ್ರನು ಚತುರ್ಥ ಸ್ಥಾನವನ್ನೊಂದುತ್ತಾನೆ. ಆದರೇನು? ಸರ್ವಗುಣಸಂಪನ್ನತೆಯಿಂದಾಗಿ ತಂದೆಯ ಎದೆಗೊಪ್ರಿದ ನಂಬುಗೆಗಿಂಬಾದ ಕುಮಾರನೆಂದರೆ ಗೋವಿಂದರಾಜನೇ ಆಗಿ ದ್ಹನು. ಅಜ್ಜನಾದ ಶುಭತುಂಗನ ಉದಾತ್ತವೃತ್ತಿ, ಅಯ್ಯ - ಹಿರಿಯಯ್ಯಂದಿ ರಾದ ನಿರುಪಮ - ದಂತಿದುರ್ಗರ ಅಸಾಮಾನ್ಯ ಪ್ರತಾಪ, ತನ್ನದೇ ಆದ ನಡವಳಿ ಜಾಣ್ಮೆಗೆಯ್ಮೆಗಳು, ಆತನಲ್ಲಿ ಮುಪ್ಪುರಿವಡೆದು ಹೆಣೆದುಕೊಂಡಿದ್ದುವು. ಗೋವಿಂದನು ಪಿತೃಭಕ್ತನು; ತಂದೆ ಜೀವಂತನಾಗಿದ್ದಾಗಲೆ ತನ್ನ ತೇಜಸ್ವಿತೆ ಯನ್ನು ಲೋಕದಲ್ಲಿ ಹೊಳೆಯಿಸಿದಾತನು. ಮಗನ ಅಸಮಾನ ಗುಣ ಪ್ರತಾ ಪಾದಿಗಳನ್ನೆಲ್ಲ ಪರಿಭಾವಿಸಿದ ತಂದೆ, ಈತನು ಕ್ರಮಕ್ಕನುವಾಗಿ ಪಟ್ಟಾಧಿಕಾರಿ ಯಲ್ಲದುದರಿಂದ ತನ್ನ ಪರೋಕ್ಷದಲ್ಲಿ ಅಧಿಕಾರವು ಅಸ್ವಾನವನ್ನೊಂದಿ ದೇಶವು ಕ್ರೋಭಗೊಳ್ಳಬಹುದು ಎಂದು ಶಂಕಿಸಿ ಗೋವಿಂದನಿಗೆ ಅಭಿಷೇಕವೆಸಗುವು ದಕ್ಕೆ ಸಿದ್ದನಾದನಂತೆ; ತತ್ಸೂಚಕವಾಗಿ ತನ್ನ ಕೊರಳಿನ ಪಟ್ಟಮಾಲಿಕೆಯನ್ನೆತ್ತಿ ಮಗನ ಕೊರಳಿಗೆ ತೊಡಿಸಲಿಕ್ಕೆ ಅನುವಾದನಂತೆ. ಆಗ ಮಗನು ವಿನಯ ಪೂರ್ವಕವಾಗಿ ಹಿಂಜರಿದು *“ಆಸ್ತಾಂತಾತ?ಎಂದರೆ-ತಂದೆಯೆ, ಅದು ಹಾಗಿ *R. 700088 and their times ೧. 09 *+ಯೆಸ್ಕಾಕಾರಮಮಾನುಷಂ ತ್ರಿಭುವನ ವ್ಯಾಪತ್ತಿರಕ್ಸೋಚಿತಂ ಕೃಷ್ಣಸ್ಯೇವ ನಿರೀಕ್ಷ್ಯ ಯಚ್ಛತಿ ಪಿತರ್ಯೇಕಾಧಿಪತ್ಯಂ ಭುವಃ ಆಸ್ತಾಂತಾತ ಶವೈತದ ಪ್ರತಿಹತಾದತ್ತಾ ಸ್ವಯಂಕಂಠಿಕಾ ಕಿಂ ನಾಜ್ಜೇವ ಮಯಾ ಧೃತೇತಿ ಪಿತರಂ ಯುಕ್ತಂವಚೋ

ಯೋಭ್ಯಧಾತ್‌ WH ೧೧

_ ೨೦ ೨ಎ

ರಲ್ಲಿ ತಾವು ಪಟ್ಟಮಾಲಿಕೆಯನ್ನು ಈಗಲೆ ತೊಡಿಸಿದರೇನು ತೊಡಿಸದಿದ್ದ ರೇನು? ಪರಮಾತ್ಮನ ದಯದಿಂದ ಎಲ್ಲವೂ ಸುಗಮವಾಗಿಯೇ ಸಾಗುವುದು, ಎಂದು ತಂದೆಯನ್ನು ಸಂತಯಿಸಿದನು, ಎಂದು ಶಾಸನವೇ ಸಾರುತ್ತಿದೆ, ತಂದೆ ಅಸ್ತಂಗತನಾದನು. ಪ್ರಥಮು ಕುಮಾರನಾಗಿದ್ದ ಕಂಬನು ಕ್ರಮಪ್ರಾಪ್ತ ನಾಗಿದ್ದರೂ ಆತನನ್ನು ಅಧಿಕಾರಕ್ಕೇರಿಸಲು ಮಂತ್ರಿ - ಮಹಾಜನಾದಿಗಳಾರೂ ಅನುಮೋದಿಸಲಿಲ್ಲ ಎಂದು ತೋರುತ್ತಿದೆ. ಸರ್ವಾನುಮತದಿಂದ ಜಗತ್ತುಂಗ ಗೋವಿಂದನಿಗೆ ಪಟ್ರಾಭಿಷೇಕವಾಯಿತು. ಸಾಮಂತರಾಜರಲ್ಲಿ ತಂದೆ ವರ್ತಿಸು ತ್ತಿದ್ದ ನಡವಳಿ ಅತಿ ಕಠಿನವಾಗಿ ತೋರಿದ ಮಗನಿಗೆ, ತಂದೆ ಇದ್ದಾಗಲೆ ಅಂತ ರಂಗವನ್ನದು ಕಲಕುತ್ತಿದ್ದಿರಬೇಕೆಂದು ಮತ್ತಿನ ಪ್ರಥಮ ಕಾರ್ಯದಿಂದ ವಿಶದ ವಾಗುತ್ತಿದೆ: *“ಸಿಂಹಸಾನಾರೋಹಣವೆಸಗಿದ ಕೂಡಲೆ ನಿರುಪಮ ಕುಮಾರ ಗೋವಿಂದರಾಜನು ತನ್ನ ಮಂತ್ರಿ ವರ್ಗದೊಡನೆ ಮತ್ತು ಶಕ್ತಿತ್ರಯಾಧಿಕಾರಿ ಗಳೊಡನೆ ಆಲೋಚಿಸಿದನು. ರಾಜ್ಯಭ್ರಷ್ಟರಾಗಿದ್ದ ಸಾಮಂತ ಸಮುದಾಯ ವನ್ನೆಲ್ಲ ಆನುನಯದಿಂದ ಕರೆಯಿಸಿದನು. «ನೀವೆಂದರೆ ನನಗೆ ಪಿತೃಸಮಾನರಾದ ಹಿರಿಯರು. ಅದರಿಂದ ನಿಂಸಿಮ್ಮ ಪದವಿಗಳಲ್ಲಿ ಪುನಃ ನಿಮ್ಮನ್ನು ಸ್ಪಾನಿಸುತ್ತೇನೆ, ಎಂದು ಸಾರಿದನು. ಮಾತನ್ನು ಕಾರ್ಯದಲ್ಲಿ ಕಾಣಿಸಿದನು. ರಾಜಕಾರ್ಯ ದಕ್ಷನಾದ ಜಗತ್ತು೨ಗನು, ವರೆಗೂ ಬದ್ದನಾಗಿ ಸೆರೆಮನೆಯಲ್ಲಿದ್ದ ಗಂಗ ರಾಜನನ್ನು ಬಿಡಿಸಿದನು.” ಇದೀಗ ಗೋವಿಂದನ ಪ್ರಥಮ ವಿನಯೋದಾತ್ರತೆ. ವಿನಯೋದಾತ್ತತೆಯನ್ನುಣ್ಣುವ, ಉಂಡರಗಿಸುವ ಅಂತಶ್ಶಕ್ಕಿ ಕೃತಪ್ನುಗಂಗ' ಬಗ್ಗ ಎಲ್ಲಿಂದ ಬರಬೇಕು? ಕುದಿವ ಎಣ್ಣೆಗೆ ನೀರನ್ನೆರೆದಂತೆ ಆತನ ವಿಕೃತಿ ಉಕ್ಕಿ ಹಾರಲಾರಂಭಿಸಿತು. ಅಂಥವರಲ್ಲಿ ಕಾಣಿಸಿದ ಸಾಂತ್ರನ ಗುರಿಗೊಳ್ಳಲಾರದು; ಒಲೆಯಂತಿರುವ ಅಧಿಕಾರದಿಂದ ತಪ್ಪಿಸುವುದೇ ಸಾಧು, ಎಂದು ಭಾವಿಸಿ ಅವ ನೊಬ್ಬನನ್ನು ಪುನಃ ಕಾರಾಗೃಹದಲ್ಲಿರಿಸಿದನು. ಇದಕ್ಕೆ ಕಾರಣ ಹೀಗಿದೆ:- ಮಾಳವದಿಂದ ಕಾಂಚಿಯ ವರೆಗಿನ ಸನ್ನೆರಡು ಮಂದಿ ಸಾಮಂತರು ಮತ್ತೊಮ್ಮೆ

*ಪ್ರಾಪ್ರೋ ರಾಜ್ಯಾಭಿಷೇಕಂ ನಿರುಪಮತನಯೋಯುಃ ಸ್ವಸಾಮಂತ ವರ್ಗಾನ್‌ ಸ್ಪೇಷಾಂ ಸ್ವೇಷಾಂಪದೇಷು ಪ್ರಕಟ ಮನುನಯ್ಯೆ: ಸ್ಥಾ ಪಯಿಷ್ಕಾಮ್ಯಶೇಷಾನ್‌ ಪಿತ್ರಾಯೂಯಂ ಸಮಾನಾ ಇತಿ ಗಿರಮರಣೀನ್ಮಂತ್ರ ವರ್ಗತ್ರಿವರ್ಗೋ |

ದ್ಯುಕ್ತ: ಕೃತ್ಯೇಷುದಕ್ಷಃ ಕ್ಸಿತಿಯುವತಿ ಪತಿರ್ಮೋಚಯದ್ಬದ್ಧಗಂಗಂ W ೧೬

E.P. Ind. Vol. 2217111, Sanjan Plate

ಎ. ಶಿಗಿ ಎ.

ಗುಟ್ಟಾಗಿ ಕೂಟಗೂಡಿದರು. ರಾಜ್ಯಾಧಿಕಾರದಲ್ಲಿ ನಿರಾಶನಾದ ಗೋವಿಂದನ ಅಣ್ಣ ಕಂಬನೇ ಕೂಟಿರಚನೆಗೆ ಸ್ತಂಭವಾದರೆ, ಕೃತಫ್ಲುನಾದ ಗಂಗರಾಜನೇ ಮಾಡವಾದನು. ಉಳಿದವರು ಅನ್ಯಸಾಧನಗಳಾದರು. ಹಂಚಿಕೆಯದು ಗೋವಿಂದರಾಜನ ಚತುರ ದೃಷ್ಟಿಗೆ ಕಾಣದಿರಲಿಲ್ಲ. ಮೆದುಬೆಣ್ಣೆಯೆನ್ನಿಸಿದ್ದ ಅವನೆದೆ ಕಗ್ಗಲ್ಲಾಯಿತು. ಅವನ ಹುರುಪಿನ ಕೈವಾಡಕ್ಕಂ ಜನ ಸಾಮಂತರು ತಂತಮ್ಮ ತಪ್ಪುಗಳನ್ನೊಪ್ಪಿ ಮುಂದೆ ಅಂಥ ಕೂಟಗುಳಿತ ಕ್ಕಿಳಿಯಲಾರೆವು ಎಂದು ಮಾತುಗೊಟ್ಟು ನಿಮುಕ್ತರಾದರು. ಆದರೆ ಆವರೆಲ್ಲ ರನ್ನೂ ಹುರಿದುಂಬಿಸಿದ ಗಂಗವನಿಗೆ ಕೆಟ್ಟ ಮೇಲಾದರೂ ಬುದ್ದಿ ಹೇಗೆ ಬರಬೇಕು?

*ಉಪಗತವಿಕೃತಿ: ಕೃತಪ್ನುಗಂಗೋ ಯದುದಿತ ದಂಡಪಲಾಯನೋನು ಬಂಧಾತ್‌ | ಅಪಗತಪದಶೃಂಖಲೋಖಲೋಯ: ಸಸಿಗಲ ಬಂಧಗಲ: ಕೃತಸ್ಸಯೇನ

ಗೋನಿಂದರಾಜನ ಉಪಕಾರದಿಂದಲೂ ಕೃತಪ್ಸನಾದ ಗಂಗನು ವಿಕಾರ ಪರವಶನಾದನು. ಹೌದು, ಕುಡಿದುದು ಹಾಲಾದರೂ ಹಾವಿನ ಮುಖದಲ್ಲಿ ವಿಷವಾಗಿ ಮಾರ್ಪಡುತ್ತಿದೆ. ಕ್ರುದ್ಧನಾದ ಗೋವಿಂದನು ದಂಡಿಸಲು ಸಿದ್ದ ನಾದಾಗ ಹೇಡಿ ಗಂಗನು ನಲಾಯನಕೆ ನುವಾದನು. ಅಂಥ ಗೋವಿಂದನ ೮೦೫ ಯನ್ನಗಲಿ ಓಡುವುದಾದರೂ ಎಲ್ಲಿಗೆ? ಸಬ ಪ್ರಶ್ನೆ ಮೂಢ ಗಂಗನ ಎದೆ ಯಲ್ಲಿ ಏಳಲಿಲ್ಲ. ಮೊದಲು ಕಾಲಿನಿಂದ ಕಳಚಿದ ಸಂಕಲೆ ಮತ್ತೆ ಕೊರಳಿಗೂ ಸುತ್ತಿತು,. ಆಪರಾಧಿಗಳಿಗೆಲ್ಲ ತಕ್ಕ ಶಾಸ್ತಿಯಾಯಿತು ಎನ್ನುವ. ಆದರ

ಪರಾಧವೆಂಬುದು ಯಾರೆಸಗಿದರೂ ಅಪರಾಧವೆ ಅಲ್ಲವೆ? ತನ್ನಣ್ಣನಾದ

ಕಂಭನೂ ಮತ್ತರಗ್ರ ಸ್ತನಾಗಿ ಅಪರಾಧದಲ್ಲಿ ನಾದುದರಿಂದ ಅವ ನನ್ನು ಏಕಾಂತದಲ್ಲಿ ಕರೆದು ವಿಚಾರಿಸಿರಬೇಕು. ಮೇಲೆ ಅವನ ಒಪ್ಪುಗೆ ಯಂತೆ, ಆತನನ್ನು ರಾ ಪ್ರಕ ಕೂಟಿ ಪ್ರತಿನಿಧಿಯನ್ನಾಗಿ ಗಂಗರಾಜ್ಯದಲ್ಲಿ ನೆಲೆಗೊಳಿ ದಂತೆ ಕಿಳಿದುಬರುತ್ತಿದೆ. ಸಂಗತಿ ಮೇಲೆ ಸೂಚಿಸಿದ ಕಂಭದೇ ಗುಪ್ರೆ ಶಾಸನದ ಕಡೆಯ ವಾಕ್ಯದಲ್ಲಿ ಶಬ್ದಪೂರ್ವಕವಲ್ಲದಿದ್ದರೂ ತಾತ್ತಯಾ ರ್ಥದಿಂದ ತಿಳಿದುಬರುತ್ತಿದೆ, ವಾಕ್ಕಾಂಶ ಹೀಗಿದೆ:

ಟೆ . ರಣಾವಲೋಕ ಶ್ರೀ ಕಂಭರಾಜ: ಪುನ್ನಾಡ ಏಡೆನಾಡುವಿ

q KW [OW

* Sanjan Plate Verse 18

ಎ. ಠ೪೪

ಸಯೇ . .. . ತಳವನನಗರ ಮಧಿವಸತಿ ವಿಜಯ ಸ್ಮಂಧಾವಾರೇ . . . .? ಇದರಿಂದ ಕಂಭದೇವನು ತಳವನನಗರ (ಆಗಿನ ಗಂಗರಾಜಧಾನಿ)ದೊಳಗಿನ ತನ್ನ ನಿಜಯ ಸ್ಕಂಧಾವಾರ (ಜಯಿಸಿದ ಸೇನೆ ನೆಲೆವಡೆವ ಬೀಡು)ದಲ್ಲೆ ಇದ್ದು ರಾಜ್ಯವನ್ನು ಪರಿವಾಲಿಸುತ್ತಾ ದಾನ ಶಾಸನವನ್ನೆಸಗಿದುದೆಂದು ಸಿದ್ದ ವಾಗುತ್ತಿದೆ. ಗಂಗರಾಜನು ಬದ್ಧನಾಗಿದ್ದುದರಿಂದ ಗೋವಿಂದನೂ ತನ್ನ ಪ್ರತಿ ನಿಧಿಯನ್ನು ಅಲ್ಲಿರಿಸಿ ರಾಜ್ಯರಕ್ಷಣವನ್ನೆಸಗುತ್ತಿದ್ದನೆಂದು ಇದರಿಂದ ನಿಶದವಾಗು ತ್ತಿದೆ. ಶಾಸನವು (ತ್ರಿಂಶದುತ್ತರೇಷ್ಟತೀತೇಷು [ಸಪ್ತಶತೇಷು] ಶಕವರ್ಷೇಷು' ಎಂದರೆ ಶಾ.ಶ. ೭೩೦ (ಕ್ರಿ.ಶ. ೮೦೮)ರಲ್ಲಿ ಸಾಂಗವಾಯಿತು. ಮೊದಲೆತನ್ನ ತಮ್ಮಂದಿರಾದ ಸುವರ್ಣವರ್ಷ ಕರ್ಕರಾಜ - ಇಂದ್ರರಾಜರನ್ನು, ಗೋವಿಂದನು ಗುರ್ಜರ ಪ್ರಾಂತದ ತಮ್ಮ ಉಪರಾಜಧಾನಿಯಲ್ಲಿ ನೆಲೆಗೊಳಿಸಿದ್ದನು. ಸುವರ್ಣ ವರ್ಷನೆಂದರೆ ಎಲ್ಲ ವಿಚಾರದಲ್ಲಿಯೂ ಅಣ್ಣನಿಗೆ ತಕ್ಕ ತಮ್ಮನೇ ಆಗಿದ್ದನು; ಒಂದಿಷ್ಟು ದೂರದಲ್ಲಿದ್ದರೂ ಶ್ರೀರಾಮನಿಗೆ ಲಕ್ಷ್ಮಣನಂತಾಗಿದ್ದನು.

ಜಗತ್ತುಂಗ-ಗೋವಿಂದರಾಜನೆಂದರೆ, ನಮ್ಮ ಅಖಂಡ ಕರ್ಣಾಟಿಕಕ್ಕ ಮಾತ್ರವಲ್ಲ; ಅಥವಾ ಮತ್ತಿನ ನಿಜಯನಗರದ ಅರಸರಂತೆ ದಕ್ಷಿಣಾ ಪಥಕ್ಕೆ ಮಾತ್ರವೂ ಅಲ್ಲ; ಇಡಿ ಭಾರತ ಭೂಮಿಗೇ ಒಕ್ಕೊಡೆಯ ಚಕ್ರವರ್ತಿಯಾಗಿದ್ದನು. ಭಾರತ ಭೂಮಿಗೆ ಚಕ್ರವರ್ತಿ

ಚಕ್ರವರ್ತಿ ಗಳೆನ್ನಿಸಿದ ಕೆಲಮಂದಿ ರಾಜರ ಹೆಸರನ್ನು ನಾವು ಪುರಾಣ ಗಳಲ್ಲಿ ಕಾಣುತ್ತೇವೆ. ಶಕ ಪುರುಷನಾದ ವಿಕ್ರಮಾ

ದಿತ್ಯನು ಅಂಥವನೆಂದು ಹೇಳುತ್ತಾರಾದರೂ, ಪುರಾಣಚ್ಛಾಯಾಗ್ರಸ್ತವಾಗಿ ತೋರುವ ಅವನ ಚರಿತ್ರೆ ಇನ್ನೂ ಬೆಸುಗೆಯನ್ನುಳಿದ ಬಂಗಾರವಾಗಲಿಲ್ಲ. ಕುಂತಳದೇಶದ ಶಾಲಿವಾಹನದಾದರೂ ಹಾಗೆಯೇ. ಅಶೋಕನನ್ನಾದರೂ ತಾತ್ತ್ವಿಕ ಚಕ್ರವರ್ತಿ ಎನ್ನಬೇಕಲ್ಲದೆ ರಾಜ್ಯಾಧಿಕಾರ ದೃಷ್ಟಿಯಿಂದಲ್ಲ. ಆದುದ ರಿಂದ ಭಾರತಭೂಮಿಯ ವರೆಗಿನ ಚಾರಿತ್ರಿಕ ಚಕ್ರವರ್ತಿ ಎಂಬ ಹೆಸರು ಸಾರ್ಥಕವಾಗಿ ಒದಗಿದವನೆಂದರೆ ರಾಷ್ಟ್ರಕೂಟ ವಂಶದ ಮೂರನೆ ಗೋವಿಂದ ರಾಜನಲ್ಲದೆ ಇನ್ನೊಬ್ಬನಿಲ್ಲ. ಇದನ್ನು ನಾವಾಡುವುದು ಮಾತ್ರವಲ್ಲ; ಶ್ರೀ.,

ತು ಎ. ಎಸ್‌. ಅಳ್ತೇಕರರೂ ತಮ್ಮ *ಚಾರಿತ್ರಿಕ ಗ್ರಂಥದಲ್ಲಿ ಸಂದೇಹವಿಲ್ಲದಂತೆ

ಗೋವಿಂದರಾಜನು

Rashtra-kutas their times Govinda 111 Pages 59-71

ಎ. ಶಿಶ್ಚಿ

ವಿಸ್ತರಿಸಿ ತೋರಿದ್ದಾರೆ. ಆದರೆ ಅವರ ಗ್ರಂಥದಲ್ಲಿಯೂ ರಾಷ್ಟ್ರ ಕೂಟರ ಮಾನ್ಯಖೇಟಾತ್ರೂರ್ವದ ರಾಜಧಾನಿ ಯಾವುದೆಂಬುದು ಸಂದಿಗ್ಧ ವಾಗಿಯೇ ಉಳಿದಿದೆ. ಅದರಿಂದ, ಜಗತ್ತುಂಗ- ಗೋವಿಂದ ಚಕ್ರ ವರ್ತಿಯ ಪ್ರತಾಪಾದಿಗಳನ್ನು ಅತಿ ಸಂಗ್ರಹವಾಗಿಯಾದರೂ ಒಂದಿಷ್ಟು ಸೂಚಿಸಬೇಕು. ಸೂಚನೆಯಿಂದ ಕನ್ನಡನಾಡಿನ ವಿಸ್ತಾರದ ಮತ್ತು ಕನ್ನಡ ಸಾಹಿತ್ಯದ ಮಾರ್ಗಭೇದಾದಿಗಳ ವಿವೇಚನೆಗೂ ಸುಗಮವಾದೀತು.

ಆಗ ಉತ್ತರ ಪ್ರಾಂತದಲ್ಲಿ ಬಂಗಾಲದ ಧರ್ಮಪಾಲನೆಂಬ ಅರಸನು ಪ್ರಬಲನಾಗಿದ್ದನು. ಇವನು ಕನೋಜದ ವತ್ಸರಾಜನನ್ನು ಗೆದ್ದು ತನ್ನವನಾದ ಚಕ್ರಾಯುಧನೆಂಬಾತನನ್ನು ಪ್ರತೀಹಾರ ಸಿಂಹಾಸನಕ್ಕೇರಿಸಿದ್ದನು. ಇದನ್ನ ವಲೋತಿಸಿ, ಸಿಂಹಾಸನಕ್ಕೆ ದ್ವಿತೀಯ ದಾಯಾದಿ ಎಂದೆನ್ನಿಸಿದ "ಎರಡನೆಯ ನಾಗ ಭಟ' ಎಂಬಾತನು ಉಕ್ಕುವ ಪರಾಕ್ರಮದಿಂದ ಹುರುಪೇರಿದನು. ಸಿಂಧು ದೇಶದ ರಾಜನ ಎಂದರೆ-ಬಹುಶಃ ಹೊಸತಾಗಿ ಹೊರಗಣಿಂದ ಬಂದು ಅಲ್ಲಿ ನೆಲಸಿದ್ದ ಮುಸಲ್ಮಾನ ರಾಜನ, ಮತ್ತು ವೆಂಗಿಯ ಚಾಳುಕ್ಕರೇ ಮೊದ ಲಾದವರ ನೆರವನ್ನೊಂದಿದ ನಾಗಭಟನು, ಧರ್ಮಪಾಲ ಚಕ್ರಾಯುಧರನ್ನು ಸೋಲಿಸಿದನು. ಅರಸಾಳಿಕೆ ಎಂಬುದು ಧರ್ಮಮಾರ್ಗದಲ್ಲಿ ನಡೆದರೆ ಲೋಕಕ್ಕೆ ಅಮೃತನಾಗುವುದು. ಅದು ತಪ್ಪಿ ವ್ಯಕ್ತಿಗಳ ಹೆಮ್ಮೆಯ ನರಗಳಲ್ಲಿ ತುಂಬಿ ತುಳುಕಿ ಚಿಮ್ಮಿದರೆ ನಂಜಾಗಿ ಪರಿಣಮಿಸುವುದು. ಉತ್ತರಾಪಥಧದಲ್ಲಿ ಸಾಗುತ್ತಿದ್ದ ಅಧಿಕಾರಲಾಲಸೆಯ ಗೊಂದಲವನ್ನು, ನಮ್ಮ ಗೋವಿಂದ ರಾಜನು ಅವಲೋಕಿಸಿದನು; ಇದನಿತ್ಸಂ ಎಂದು ನಿರ್ಧರಿಸಿದನು. ಮೇಲೆ ಸುಸ ಜ್ಹಿತವಾದ ಸೇನಾಬಲದೊಡನೆ ಅತ್ತ ದಾಳಿವರಿದನು. ಅದನ್ನೇ ಸಂಜನ ಶಾಸನ ಕಾರನು, ೪ಮಾರ್ತಂಡಃ ಸ್ವಯಮುತ್ತರಾಯಣ ಗತಸ್ತೇಜೋನಿಧಿರ್ದುಸ್ಸಹಃ” ಎಂದು ಬಣ್ಣಿಸುತ್ತಾನೆ. ಮಾತ್ರವಲ್ಲ, ನಾಗಭಟ. ಚಂದ್ರಗುಪ್ತ- ಧರ್ಮಪಾಲ

*ಭೂಭ್ಮನ್ಮೂರ್ಥ್ಗಿ ಸುನೀತಪಾದನಿಶರಃ ಪುಣ್ಯೋದಯಸ್ವೇಜಸಾ | ಕ್ರಾಂತಾಶೇಷದಿಗಂತರಃ ಪ್ರತಿಪದಂ ಪ್ರಾಸ್ತಪ್ರತಾಪೋನ್ನತಿಃ ಭೂಯೋಯೋಪ್ಯನುರಕ್ಷಮಂಡಲಯುತಃ ಪದ್ಮಾಕರಾನಂದಿತಃ | ಮಾರ್ತಂಡಃ ಸ್ವಯಮುಶತ್ತರಾಯಣ ಗತಸ್ಮೇಜೋನಿಧಿರ್ದುಸ್ಸಹಃ ೨೧

Sanjan ₹1860.

ಚಕ್ರಾಯುಧರೆಂಬ, ಆಗಿನ ಕಾಲದಲ್ಲಿ ಇಡಿ ಉತ್ತರಾಪಥದಲ್ಲಿ ಪ್ರಬಲತೆಗೇರಿ ಕೈವೀಸುತ್ತಿದ್ದ ಪ್ರತಾಸಿಗಳಲ್ಲರನ್ನೂ ಪಾದಾಕ್ರಾಂತರನ್ನಾಗಿ ಮಾಡಿದನು. ಮೇಲೆ ಅವರವರನ್ನು ಅಲ್ಲಲ್ಲಿ ತನ್ನ ರಾಷ್ಟ್ರಕ ಇಟ ಪೀಠಕ್ಕೆ ಬಾಗಿದ ಸಾಮಂತರ ನ್ನಾಗಿನೆಲೆಗೊಳಿಸಿ ಹಿಂದಿರುಗಿದ ದಿಗ್ವಿಜಯ ಕ್ರಮವು ಸಂದೇಹಕ್ಕೆಡೆ ಇಲ್ಲದಂತೆ *ವರ್ಣಿತವಾಗಿದೆ. ಕೀರ್ತಿನಾರಾಯಣನೆಂಬುದು ಜಗತ್ತುಂಗ ಗೋವಿಂದ ರಾಜನ ಬಿರುದುಗಳೊಳಗೊಂಡು ಎಂಬ ಸಂಗತಿಯನ್ನು ಮರೆಯಬಾರದು. ಗೋವಿಂದನನ್ನು ಮಾರ್ತಂಡನೊಡನೆ ಒಂದುಗೂಡಿಸಿದ ಎಂದರೆ ರೂಪಕಾ ಲಂಕಾರದಿಂದ ಬೆರಸಿದ ಶಾಸನಕವಿ, ಹಿಂದಣ ೨೧ನೇ ಶ್ಲೋಕದಲ್ಲಿ “ಸ್ವಯಮು ತ್ತರಾಯಣಗತಃ” ಎಂದು ಬಣ್ಣಿಸಿದ ಪದಯೋಜನೆಯನ್ನು ಭಾವಿಸಿರಿ. ಇದರಿಂದ ಗೋವಿಂದರಾಜನ ರಾಜಧಾನೀ ಪ್ರದೇಶವು ವಿಂಧ್ಯಾದುತ್ತರ ಭಾಗ ದಲ್ಲಲ್ಲ ಎಂಬುದು ಹೊಳೆಯುತ್ತಿದೆಯಲ್ಲವೆ? ವಿಷಯವನ್ನು ಯಾರೂ ಅಲ್ಲಗಳೆಯಲಿಕ್ಕಿಲ್ಲ ಎಂದು ನಂಬಿ ಮುಂದುವರಿಯುವ.

ತೆಂಕಣ ಪ್ರಾಂತದ ಹಲವರಸರು ಗೋವಿಂದನ ಆಳಿಕೆಗೆ ಮೊದಲೇ ಬಾಗಿದ್ದರು. ಆದರೂ ಹೊರಗೆ ಬಾಗಿ ಒಳಗೆ ನಿಗುಚಿದನರು ಕೆಲವರಿರ ಬೇಕೆಂದು ತೋರಿತು. ಅದರಿಂದ ಕಡೆಗೆ ದಾಳಿವರಿದನು. ಮುಂಬರಿದು «ಕೇರಳ ಪಾಂಡ್ಯ ಚೋಳಾ?'ದಿ ದ್ರವಿಡ ಮಂಡಲದ ಅರಸರನ್ನೂ ಆಂಧ್ರರನ್ನೂ ಪಾದಾಕ್ರಾಂತರನ್ನಾಗಿ ಮಾಡಿದ ಚಕ್ರವರ್ತಿಯ ಮನಸ್ಸು ಸಿಂಹಳದ ಕಡೆಗೆ ಧಾವಿಸಿತು. ಧಾಟಿ ಕ್ರಮವನ್ನು ಶಾಸನಕವಿ ಹೀಗೆ ನಿರೂಪಿಸುತ್ತಾನೆ:

* ಸನಾಗಭಟ ಚಂದ್ರಗುಪ್ತನ ಪಯೋರ್ಯ ಶೌರ್ಯಂರಣೇ। ಷ್ವಹಾರ್ಯಮಪಹಾಯ ಧೈರ್ಯನಿಕಲಾನಥೋನ್ಮೂಲಯನ್‌ || ಯಶೋರ್ಜನಪರೋ ನೃಪಾನ್ಸ್ಪಭುವಿ ಶಾಲಿಸಸ್ಯಾನಿವ |

ಪುನಃ ಫುನರತಿಷ್ಠಿ ಪತ್‌ ಸೃಪದಏವಚಾನ್ಯಾನಪಿ 2೨

ಹಿಮವತ್ರರ್ವತ ನಿರ್ಬುರಾಂಬುತುರಗೈಃ ಪೀತಂಚ ಗಾಂಗಂಗಜೈ | ಧೃನಿತಂ ಮಜಚ್ಚನತೂರ್ಯಕೈರ್ದಿಗುಣಿತಂ ಭೂಯೋಪಿ ತತ್ವಂದರೇ | ಸ್ವಯಮೇವೋಪನತೌ ಚಯ ಸ್ಕಮಹತಸ್ಕೌ ಧರ್ಮಚಕ್ರಾಯುಂಧೌ | ಹಿಮವತ್ಕೀರ್ತಿ ಸರೂಪತಾಮುಪಗತಸ್ತತ್ಕೀರ್ತಿ ನಾರಾಯಣಃ ೨೩ಎ |

Sanjan Plate.

4

| (>

ರಾಜಾಮಾತ್ಯವರಾವಿವ ಸ್ವಹಿತ ಕಾರ್ಯಾಲಸ್ಯನಸ್ಟೌಹಠಾ |

ದ್ಬಂಡೇನೈವ ನಿರಸ್ಯ ಮೂಕಬಧಿರಾವಾನೀಯಹೇಲಾಪುರೇ ,

ಲಂಕಾತಃಕಿಲ ತತ್ರಭುಪ್ರತಿಕೃತೀ ಕಾಂಚೀಮುಪೇತೌತತ। |

ಕೀರ್ತಿಸ್ತಂಭನಿಭೌ ಶಿವಾಯತನಕೇ ಯೇನೇಹ ಸಂಸ್ಥಾಸಿತೌ ೩೪.೬

ಶ್ಲೋಕದ ಅರ್ಥವನ್ನು ವಿವೇಚಕ ದೃಷ್ಟಿಯಿಂದ ಪರಾಂಬರಿಸಿರಿ: - ಧಾರ್ಮಿಕವೆಸ್ಸಿಸಿದ ರಾಜಕೀಯ ಕಾರ್ಯದಲ್ಲಿ ಆಲಸ್ಯವೆಸಗಿ, ಪ್ರಜಾವರ್ಗದ ಯಾವ ಪ್ರಾರ್ಥನೆಗೂ ಮೂಕರಾದ ಬಧಿರ (ಕಿವುಡ) ರಾದ ಲಂಕಾ ನಗರದ ರಾಜಾಮಾತ್ಯರನ್ನು ದಂಡಿಸಿದ ಮೇಲೆ ತತ್ಸಮಾನಗಳಾದ ಅವರ "ಪ್ರತಿಕೃತಿ'ಗಳು (ಪ್ರತಿಮಾದ್ವಯ) ಮೊದಲು ಕಾಂಚೀ ನಗರಕ್ಕೆ ಶರಲ್ಪಟ್ಟುವು. ಮೇಲೆ (ತನ್ನ) ಕೀರ್ತಿಸ್ತಂಭ ಸಮಾನಗಳಾಗಿ "ಇಹ ಹೇಲಾಪುರೇ? -ಎಂದರೆ (ಈ ವಿಲಾಸ ನಗರಿಯಲ್ಲಿ? ಸಾಗಿಸಲ್ಪಟ್ಟು ಸ್ಪಾಪಿತಗಳಾದುವು.

ಇದರಿಂದ ನಮ್ಮ ಜಗತ್ತುಂಗನು ಹಿಮಗಿರಿಯಿಂದ ಲಂಕಾಂತವಾದ ಭಾರತಭೂಮಿಗೆ ಚಕ್ರವರ್ತಿಯಾದನೆಂಬುದು ನಿಸ್ಸಂಶಯವಾಗಿ ವಿಶದವಾಗು ತ್ತಿದೆ. ಇದನ್ನು ಶ್ರೀ. ಎ. ಎಸ್‌. ಆಳ್ತೇಕರರೂ ಸಾರಿರುವುದರಿಂದ, ನಾವು ಹೆಚ್ಚಾಗಿ ಹೇಳಬೇಕಾಗಿಲ್ಲ. ಆದರೆ ಇಂಥ ಚಕ್ರವರ್ತಿಯ, ಮತ್ತು ಅವನ ಹಿಂದಿನವರ ರಾಜಧಾನಿ ಯಾವುದಾಗಿತ್ತು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅದನ್ನು ಹಿಂದೆಯೂ ಒಂದಿಷ್ಟು ಸೂಚಿಸಿದ್ದೆ ವಷ್ಟ; ಇಲ್ಲಿಯೂ ಒಂದಿಷ್ಟು ಪರಾಂಬರಿಸುವ:- ಹಿಂದೆ ವಿಸ್ತರಿಸಿದ ನೃಪತುಂಗನ ಸಂಜನ ಶ್ಲೋಕದಲ್ಲಿ ಲಂಕಾನಗರದ ರಾಜಾಮಾತ್ಯರ ಪ್ರತಿ ಕೃತಿ (ಪ್ರತಿಬಿಂಬ) ಗಳೆರಡು “ಇಹ ಹೇಲಾಪುರೇ ಸಂಸ್ಥಾವಿತೌ” ಎಂದರೆ “ಈ ವಿಲಾಸ ನಗರಿಯಲ್ಲಿ ಸ್ಥಾಪಿತಗಳಾದುವು' ಎಂದು ಹೇಳಿದೆ. ಗೋವಿಂದರಾಜನ «ಈ ಹೇಲಾಪುರ' ಎಂದರಾವುದು? ಶಾಸನದ ೫೪ನೆಯ ದೀರ್ಫ್ಥವಾದ ಗದ್ಯಭಾಗದಲ್ಲಿ ಶಾಸನಕಾರನಾದ ನೃಪತುಂಗ ದೇವನು ತನ್ನ ರಾಜ್ಯಾಧಿಕಾರಿಗಳಾದ ರಾಷ್ಟ್ರಪತಿ- ವಿಷಯಪತಿ ಮೊದಲಾದವ ರನ್ನು ಉದ್ದೇಶಿಸಿ ಆಡುವ ಮಾತನ್ನು ಅವಗಾಹಿಸಿರಿ: ಇಲ್ಲಿ “ಅಸ್ತುವಃ ಸಂವಿದಿತಂ ಯಥಾ ಮಾನ್ಯಖೇಟರಾಜಧಾನ್ಯವಸ್ಥಿ ತೇನ ಮಯಾ” ಎಂದು

ಗೋವಿಂದನ ರಾಜಧಾನಿ

“+Sanjan Plate.

ಎ. ೨೬ -

ಸ್ಥಾನ ಸೂಚನೆ ಇದೆ, ಅದು “ಇಹ” (ಇಲ್ಲಿ) ಎಂಬುದಕ್ಕೆ ಹೊದ್ದಿಕೆಯಾಗು ತ್ತಿದೆ. ಹಾಗಿದ್ದ ರೆ, ಗೋವಿಂದ ಚಕ್ರವರ್ತಿಯ ಕಾಲದಲ್ಲಿ ಆತನ "ಹೇಲಾಸುರ' ವಾಗಿದ್ದು ದನ್ನು. ಮೇಲೆ ತತ್ಸುತ್ರ ನಾದ ನೃಪತುಂಗನು ತನ್ನ ಪ್ರಧಾನ ರಾಜ ಧಾನಿಯನ್ನಾಗಿ ಮಾರ್ಪಡಿಸಿಕೊಂಡನು ಎಂದು ಭಾವಿಸುವಂತಿದೆಯಲ್ಲವೆ? ಅನನು ತೆಂಕನಾಡಿಗೆ ಬಂದಲ್ಲಿ, ತಾತ್ಕಾಲಿಕವಾಗಿ ವಾಸಿಸುವ ವಿಲಾಸ ನಗರಿ ig ಬೇರೆಯೂ ಇದ್ದಂತೆ ಆತನ AR ತಾಮ್ರಶಾಸನ” (ಶಾ. ಶೆ. ೭೩೨೩ . ಶೆ. ೮೧೦)ದ “ಶ್ರೀ ಮಯೂರಖಂಡೀ ಸಮಾ ಮಯಾ , ..? Ke ಭಾಗದಿಂದಲೂ ಗೊತ್ತಾಗುತ್ತಿದೆ. ಮಯೂರ ಖಂಡೀ ಎಂದರೆ ನಾಸಿಕದ ಹತ್ತಿರದಲ್ಲಿರುವ, ಈಗ “ಮೋರ್ಯqಂಡಿ” ಎಂದು ಪ್ರ ಸಿದ್ಧ ವಾದ ಭಾಗ ಎಂಬಲ್ಲಿ ಸಂಶಯವಿಲ್ಲ. "ಸಮಾವಾಸಿತೇನ ಮಯಾ' ಎಂದರೆ, ಪ್ರಕೃತ ಬಂದು ಬೀಡುಗೊಂಡ ನನ್ನಿಂದ, ಎಂಬ ಅರ್ಥವಲ್ಲದೆ, “ಅದೇ ಜಃ ರುವ ನನ್ನಿಂದ” ಎಂಬ ಅರ್ಥವಾಗಲಾರದು. ಕಾರಣದಿಂದ ಸಂಜನ ಶಾಸನದಲ್ಲಿ ತೋರುವ ಗೋವಿಂದರಾಜನ ಹೇಲಾಪುರವೇ ಮತ್ತೆ ಭಗ (ಮಲಖೇಡ) ವಾಗಿ ಮಾರ್ಪಟ್ಟಿತೆಂದು ಭಾಸವಾಗುತ್ತಿದೆ. ಮಾನ್ಯಖೇಟ ಎಂದರೆ ಮಾನಾರ್ಹರಾದ ರಾಜರೂ ರಾಜಬಂಧುಗಳೂ ಬಂದು ಬೇಲನ (ವಿಹಾರ) ಗೊಳ್ಳುವ ಪುರ, ಎಂಬ ಅರ್ಥವಾಗುವುದರಿಂದ 4ಹೇಲಾಪುರ' ಎಂಬುದರೊಡನೆ ಸಮಾನಾರ್ಥಕವೇ ಆಗುತ್ತಿದೆ. ಅಭಿಪ್ರಾಯವನ್ನು ಕರಹಾಡದಲ್ಲೊದಗಿದ ಕೆಳಗೆ ದೃಷ್ಟಾಂತಿಸುವ ರಾಷ್ಟ್ರಕೂಟ ಶಾಸನ ಭಾಗವನ್ನು ಸರಿಯಾಗಿ ನಿವೇಚಿಸಿದಲ್ಲಿಯೂ. ಕನ ಸಕು *“ತಸ್ಯ ಶ್ರೀಮದಮೋಘವರ್ಷ ನೃಪತಿಶ್ಚಾಲುಕ್ಯ ಕಾಲಾನಲಃ | ಸೂನುರ್ಭೂಪತಿರೂರ್ಜಿತಾಹಿತ ವಧೂವೈ ಧವ್ಯದೀಕ್ಸಾಗುರುಃ ಆಸೀದಿಂದ್ರ ಪುರಾಧಿಕಂ ಪುರಮಿದಂ ಶ್ರೀ ಮಾನ್ಯ ಚೇ ಚುಕು | ಯೇನೇದಂಚ ಸರಃಕೃತಂ ೫11! ಪ್ರಾ ಜಾ ಪುರಂ॥ ಇದರ ಅರ್ಥವನ್ನು ವಿವೇಚಿಸಿರಿ: “ಆ FON ಚಾಲುಕ್ಯ ಕಾಲಾಗ್ನಿ ಸ್ವರೂಪನೂ, ನೆಲೆಗೊಂಡ ಹಗೆರಾಯರ ಕುಲವನ್ನು ನಿರ್ಮೂಲಿಸಿ ದವನೂ ಆದ ನೃಪತುಂಗ ರಾಜನು ಜನಿಸಿದನು. ಇಂದ್ರ ರಾಜಧಾನಿಗಿಂತಲೂ

*ಎರಡನೆ ಕರ್ಕನ ಕರ್ಹಾಡ ಶಾಸನ - ಕನ್ನಡ ಸಾ. ಪರಿಷತ್ಪತ್ರಿಕೆ.

ಮೇಲಾದ ಮಾನ್ಯ ಖೇಟನಾಮಕ ರಾಜಧಾನಿಯೂ ನೆಲೆಗೊಂಡಿತ್ತು. ಜಗತ್ತುಂಗಸೂನುವಾದ ನೃಪತುಂಗನಿಂದ (ಯೇನ) ಕೆರೆಯೂ, ಎತ್ತರ ವಾದ ಮಾಳಿಗೆಯಿಂದೊಡಗೂಡಿದ ಅಂತಃಪುರವೂ ರಚಿತವಾಯಿತು.” ಇಲ್ಲಿಯ ವಾಕ್ಯ ಸ್ವರೂಪಗಳನ್ನು ಸರಿಯಾಗಿ ಪರಾಂಬರಿಸಬೇಕು. ಮೊದಲನೆಯ ವಾಕ್ಯಗಳು ಅಕರ್ಮಕ ಕರ್ತರಿ ಪ್ರಯೋಗಗಳಾಗಿಯೂ, ಮತ್ತಿನದು (ಕರ್ಮಣಿ'ಯಾಗಿಯೂ ರಚಿತಗಳಾಗಿವೆ. “ಆಸೀದಿಂದ್ರ ಪುರಾಧಿಕಂ ಪುರಮಿದಂ . .. ೬? ಎಂಬ ಅಕರ್ಮಕ ವಾಕ್ಯದಲ್ಲಿ ಮಾನ್ಯಖೇಟ ನಗರ ನಿರ್ಮಾಪಕನು ಯಾರೆಂದು ಗೊತ್ತಾಗುವುದಿಲ್ಲ. ಬಹುಶಃ ಅದು ಹಿಂದೆಯೇ ರಚಿತವಾದುದಿರ ಬೇಕು. ಯೇನೇದಂಚ ಸರಃ ಕೃತಂ ....? ಎಂಬ ಮತ್ತಿನ ಭಿನ್ನ ಪ್ರಯೋಗ ವಾಕ್ಯದಲ್ಲಿ ನೃಪತುಂಗಕೃತವಾದುದು ಕೆರೆಯೂ ಅಂತಃಪ್ರರವೂ ಎಂದು ವಿಶದವಾಗುತ್ತಿದೆ. ಭಿನ್ನ ಪ್ರಯೋಗಗಳ ಭಿನ್ನ ವಾಕ್ಯಗಳಿಗೆ ಒಂದೆ ಕರ್ತ,ಪದವನ್ನು ಪ್ರಯೋಗಿಸುವುದು ವ್ಯಾಕರಣ ಮಾರ್ಗವಲ್ಲ ಎಂಬುದನ್ನು ಮರೆಯಲಾಗದು. ಆದರೆ "ಹೇಲಾಪುರೇ . . . ಇಹ” ಎಂದು ಸಂಜನ ಶಾಸನ ದಲ್ಲಿ ತೋರುವುದರಿಂದ ಹೇಲಾಪುರ (ವಿಲಾಸಪುರ) ವೇ ಗೋವಿಂದರಾಜನ ರಾಜಧಾನಿಯಾಗಿತ್ತು ಎಂದು ಭಾವಿಸಲಿಕ್ಕಡೆಯೇ ಇಲ್ಲ. ಅದಕ್ಕೆ ಬದಲಾಗಿ ಆತನ ರಾಜಧಾನಿ ಯಾವುದೆಂದು ವಿಶದವಾಗಿ ಗೊತ್ತಾಗುವುದೋ ನೋಡುವ. ಗೋವಿಂದನು ವಿಂಧ್ಯಾದುತ್ತರಭಾಗದ ದಿಗ್ವಿಜಯವನ್ನೆಸಗಿ ಹಿಂದಿರುಗಿದುದನ್ನು ಸಂಜನ ಶಾಸನಕಾರನು ವಿವರಿಸಿದುದನ್ಸೀಕ್ಸಿಸಿರಿ: -

ಪ್ರತ್ಯಾವೃತ್ತಃ ಪ್ರಾತಿರಾಜ್ಯಂ ವಿಧೇಯಂ | ಕೃತ್ವಾರೇವಾಮುತ್ತರಾಂ ವಿಂಧ್ಯಪಾದೇ |

ಕುರ್ವನ್‌ ಧರ್ಮಾನ್‌ ಕೀರ್ತನೈಃ ಪ್ರಣ್ಯವೃಂದೈ | ರಧ್ಯಷ್ಠಾತ್ತಾಂ ಸ್ಫೋಚಿತಾಂ ರಾಜಧಾನೀಂ ॥। ೨೪ ॥|

ಶ್ಲೋಕದ ಅನ್ವಯಾನುಸಾರವಾದ ತಾತ್ರರ್ಯಾರ್ಥವನ್ನು ವಿದ್ವಾಂಸ ರಾರೂ ವರೆಗೆ ಸರಿಯಾಗಿ ಲಕ್ಷಿಸಿದಂತೆ ತೋರುವುದಿಲ್ಲ. ಗೋವಿಂದರಸನು ವಿಂಧ್ಯಾದುತ್ತರದ ಪ್ರತಿರಾಜರೆಲ್ಲರನ್ನೂ ವಿಧೇಯರನ್ನಾಗಿ ಮಾಡಿ ಹಿಂದಿರುಗಿ ದನು. ಹಾಗೆ ಹಿಂದಿರುಗಿದುದು ಎಲ್ಲಿಗೆ ಎಂಬುದು ಇದಕ್ಕಿಂತಲೆ ಮೊದಲಿನ ದಾದ ೨೩ನೆಯ ಶ್ಲೋಕಭಾಗದಲ್ಲಿ “ಪ್ರತಾಪಮಿವ ನರ್ಮದಾ ತಟಮನು

w ಥಿಲೆ

ಯಾತಃ ಪುನಃ” ಎಂದು ಸುಟಿವಾಗಿದೆ. ತನ್ನ ಪ್ರತಾಪವೋ ಎಂಬಂತೆ ರ್ರನಃ ನರ್ಮದಾ ನದಿಯ ತಟವನ್ನು ಕುರಿತು ಬಂದನು, ಎಂಬುದೇ ಇದರ ರ್ಥ. ಇಲ್ಲಿ “ಪುನಃ” ಎಂದಿರುವುದರಿಂದ ಮೊದಲು ದಿಗ್ವಿಜಯಕ್ಕೆ ಹೊರ ಟುದು ಇಲ್ಲಿಂದಲೇ ಎಂದು ಸರಿಯಾಗಿ ಹೊಳೆಯುತ್ತಿದೆ. ಮೇಲೆ ದೃಷ್ಟಾಂತಿಸಿದ ೨೪ನೆಯ ಶ್ಲೋಕದ ಅರ್ಥದಲ್ಲಿ ಕಣ್ಣಿಡಿರಿ:-“ಹಿಂದುರುಗಿದ ಗೋವಿಂದನು ವಿಂಧ್ಯಪಾದ (ಶಿಖರ)ದಲ್ಲಿ «ಉತ್ತರ' (ಉತ್‌ +ತರ) ಎಂದರೆ ಎತ್ತರವಾಗಿ ನೆಲೆ ಗೊಂಡ “ರೇವೆ” (ರೇವಾಂ)ಯನ್ನೊಂದಿ ದೇವತಾ ಕೀರ್ತನ - ಪುಣ್ಯಾಚಾರಾದಿ ಗಳಿಂದ ಧರ್ಮಕಾರ್ಯಗಳನ್ನೆಸಗುತ್ತ ಆಸ್ಟೋಚಿತೆ ರಾಜಧಾನಿಯಲ್ಲಿ ಅಧಿ ಷ್ಠಾನವೆಸಗಿದನು.” ಇಲ್ಲಿ ಕಾಣುವ «ತಾಂ' ಎಂಬ ಪದವು ಪೂರ್ವಾರ್ಧದ "ರೇವಾಂ' ಎಂಬ ರಾಜಧಾನಿಯನ್ನೇ ಸೂಚಿಸುವುದು ವ್ಯಾಕರಣಮಾರ್ಗಕ್ಕೆ ಬದ್ದವಾಗಿದೆ. ಹಾಗಲ್ಲವಾಗಿದ್ದರೆ (ತಾಂ' (ಆ) ಎಂಬುದು ನಿರರ್ಥಕವೇ ಸರಿ. ಇದರಿಂದ ಗೋವಿಂದನು ವಿಂಧ್ಯ ಶಿಖರದ ರೇವಾನಾಮಕ ರಾಜಧಾನಿಯಲ್ಲಿ ನೆಲ ಸಿದ್ದ ನೆಂದು ಸ್ತು ಟವಾಗುತ್ತಿದೆ. «ಉತ್ತರಾಂ?' ಎಂಬುದಕ್ಕೆ ದಿಗ್ವಾ ಚಕಾರ್ಥವೂ, (ಕೀವಾಂ' ಎಂಬುದಕ್ಕೆ ನರ್ಮದಾನದೀ ತಡಡರಂದಲೇ ವಿದ್ವಾಂಸರಿಗೆ ಶ್ಲೋಕವು ಭ್ರಮೆಯನ್ನುಂಟುಮಾಡಿದಂತೆ ತೋರುತ್ತಿದೆ. ಹೇಳಿಕೆಯೇ ನಿಜಸ್ಥಿತಿ ಎಂಬಂಶವನ್ನು ಸ್ಪತಃ ಗೋವಿಂದರಾಜನದೇ ಆದ ಮಂಡಳಶಾಸನ ಶ್ಲೋಕವೂ, ಅದರೊಡನೆ ಅಭಿನ್ನವಾದ ಅವನಣ್ಣ ಕಂಬ ರಾಜನ ಬಾದನಗುಪ್ರ ಶಾಸನ ಶ್ಲೋಕವೂ ಏಕಸ್ಪರೂಪವಾಗಿ ತಿಳಿಸುತ್ತಿವೆ.

i |

ಛೆ

ವಿಂಧ್ಯಾಧ್ರಃ ಕಟಕೇ ನಿವಿಷ್ಟಕಟಕಂ ಶ್ರುತ್ವಾ ಚರೈರ್ಯ್ಯೆರ್ನಿಜೈಃ | ಸ್ಟ ೦ದೇಶೆಂ ಸಮುಪಾಗತಂ ಧ್ರುವಮಿತಿ ಜ್ಞಾತ್ವಾ ಭಿಯಾ ಪ್ರೇರಿತಃ ಜಃ ದ್ರು ಟೇ ಾಪ್ರಪೂರ್ವೈಃ ಪರೈಃ

ಯಸ್ಯೇಚ್ಛಾ ಮನುಕೂಲಯನ್‌ ಕುಲಧನಃ : ವಾದಪ ಹಾ |

ತಾತ್ರರ್ಯವನ್ನೀಕ್ಷಿಸಿರಿ: - “ನಿಂಧ್ಯಾಚಲದಲ್ಲಿ ನೆಲೆಗೊಂಡ ಕಟಕ

(ರಾಜಧಾನಿ)ದಲ್ಲಿ, ಉತ್ತರ ಭಾಗದ ದಿಗ್ವಿಜಯದಿಂದ ತಿರುಗಿದ ಗೋವಿಂದ

*(ಕಟಕ' ಎಂಬುದಕ್ಕೆ ಸೇನಾನಿವೇಶ - ರಾಜಧಾನಿಗಳೆ ಮೊದಲಾದ ಹಲವು ಅರ್ಥಗಳಿವೆ. ಇಲ್ಲಿ "ರಾಜಧಾನಿ' ಎಂದೇ ಅರ್ಥವಾಗಿರಬೇಕು.

೦೯ _

ರಾಜನು ಪ್ರವೇಶಿಸಿದುದನ್ನು ಮಾರಾಶರ್ವನೆಂಬ ಮಾಂಡಲಿಕರಾಜನು ತನ್ನ ಗೂಢಚಾರಕರ ಮೂಲಕವಾಗಿ ತಿಳಿದನು. ಒಡನೆ ಸ್ವದೇಶವನ್ನು ಕುರಿತು ಪುನಃ ನಿರುಪಮ ಧ್ರುವನೇ ಬಂದನೋ ಎಂದು, ಆತನು ಭಯದಿಂದ ಭ)ಮೆನಡೆದನಂತೆ. ಹೆದರಿಕೆಯಿಂದಾಗಿ ಬೇಗನೆ ಬಂದು, ಇತರರಾರಿಗೂ ದೊರಕದ ಅಮೌಲ್ಯಗಳಾದ ಕುಲಧನಗಳಿಂದಲೂ ವಂದನೆಗಳಿಂದಲೂ ಮಾರಾಶರ್ವನು ಗೋವಿಂದರಾಜನನ್ನು ತೃಪ್ತಿಗೊಳಿಸಿದನು.' ಇಲ್ಲಿಯ (ಕಟಕೇ' ಎಂಬ ಪದವು, ವಿದ್ವಾಂಸರಿಗೆ ಉತ್ತರಾಪಥದಿಂದ ಹಿಂದಿರುಗಿ ಗೋವಿಂದ ರಾಜನು «ಬೀಡುಬಿಟ್ಟ ಸ್ಥಾನ' ಎಂಬ ಭ್ರ ಮವನ್ನುಂಟುಮಾಡಿತಾಗಿ ತೋರುತ್ತಿದೆ. ಆದರೆ “ಸ್ವಂದೇಶಂ ಪುನರಾಗತಂ ಧ್ರುವಮಿವ ಜ್ಞಾತ್ವಾ... ಎಂಬ ಆಲಂಕಾರಿಕವಾದ ಹೇಳಿಕೆಯನ್ನು ಸರಿಯಾಗಿ ಪರಾಂಬರಿಸಿದಲ್ಲಿ, ಆಭ್ರಮೆ ತೊಲಗುವಂತಿದೆ. ಮಾತಿನಿಂದ ಗೋವಿಂದನ ತಂದೆಯಾದ ನಿರುಪಮ ಧ್ರುವನ ಸ್ವದೇಶವು ಅಥವಾ ರಾಜಧಾನೀ ಪ್ರದೇಶವು, ಅದೇ ಆಗಿತ್ತೆಂಬುದು ಹೊಳೆಯುತ್ತಿದೆ. ಇದರಿಂದ ಮಾರಾಶರ್ವನೆಂಬವನು ಹಿಂದಿನ ಧ್ರುವನ ಪ್ರತಾಪಕ್ಕೊಮ್ಮೆ ಆಹುತಿಯಾದವನು, ಅವನು ಸ್ವರ್ಗಂಗತನಾದ ಮೇಲೆ ರಾಷ್ಟ್ರಕೂಟ ಸಿಂಹಾಸನವನ್ನು ಗರ್ವದಿಂದ ಅಲಕ್ಸಿಸುತ್ತಿದ್ದವನು ಎಂಬುದೂ ವಿಶದವಾಗುತ್ತಿದೆ. ಶ್ರೀ. ಎ. ಎಸ್‌. ಅಳ್ಲೇಕರರು ತಮ್ಮ ಗ್ರಂಥದಲ್ಲಿ “ಮಾರಾ ಶರ್ವನೆಂದರೆ ವರೆಗೂ ರಾಷ್ಟ್ರಕೂಟ ರಾಜರಿಗೆ ಬಾಗದ ಸ್ವತಂತ್ರ ವ್ಯಕ್ತಿ” ಎಂದು ಭಾನಿಸಿದುದು, ಶಾಸನೋಕ್ತಿಯಿಂದ ಸಡಿಲಾಗುತ್ತಿದೆ. ಧ್ರುವನು ಸ್ವರ್ಗಂಗತನಾದ ಮೇಲೆ ತಾನು ಸೃತಂತ್ರನೆಂದೆಣಿಸುತ್ತಿದ್ದ ಮಾರಾಶರ್ವನ ಭ್ರಮೆ, ಗೋವಿಂದನ ದಿಗ್ವಿಜಯ ಪ್ರತಾಪವನ್ನರಿತು ಮಾಯನಾಯಿತೆಂಬುದೇ ಮಾತಿನ ತಾತ್ರರ್ಯ. ಮುಂದೆ ದೃಷ್ಟಾಂತಿಸುವ ಇನ್ನೊಂದು ಶ್ಲೋಕವು, ಗೋವಿಂದನ ಮಂಡಲದ ಶಾಸನ- ಕಂಬದೇವನ ಬಾದನಗುಪ್ರಯ ಶಾಸನಗ ಳೆರಡರಲ್ಲಿಯೂ ತೋರುತ್ತಿದೆ. ಇದನ್ನೂ ಅತ್ಯಾವಶ್ಯಕವಾಗಿ ಪರಿಭಾವಿಸಬೇಕು.

ನೀತ್ವಾ ಶ್ರಿಭವನೇ ಘನಾಘನ ಘನವ್ಯಾಪ್ತಾಂಬರಾಂ ಪ್ರಾವೃಷಂ ತಸ್ಮಾದಾಗತವಾನ್‌ ಸವ:ಂನಿಜಬಲೈರಾತುಂಗಭದ್ರಾತಟಂ |

“ಇಡಿ ಮುಗಿಲು ಮುಚ್ಚಿ ಮಸುಕಾದ ಬಾಂದಳದಿಂದ ಕೂಡಿದ ಮಳೆ ಗಾಲವನ್ನು ಶ್ರೀಭವನ'ದಲ್ಲಿ ಕಳೆದನು. ಮೇಲೆ ಸೇನಾಸಮೇತನಾಗಿ

ಜನ ಜ್ಯ

(ದಕ್ಷಿಣ ದಿಗ್ವಿಜಯ ಮಾನಸನಾಗಿ) ತುಂಗಭದ್ರಾ ತಟದತ್ತ ಹರಿದನು” ಶ್ರೀಭವನ ಎಂದರೆ ಬೇರಾವುದೂ ಅಲ್ಲ; ಅವನ ಸ್ಪೋಚಿತ ರಾಜಧಾನಿಯಾದ, ರೇವಾನಗರಿಯೊಳಗಣ ಅರಮನೆಯ ಹೆಸರೇ ಇದು. ಶ್ಲೋಕ ಭಾಗಗಳನ್ನೇ ಆಧರಿಸಿ ಶ್ರೀ. ಅಳ್ತೇಕರರು ತಮ್ಮ ಗ್ರಂಥದಲ್ಲಿ ಹೀಗೆನ್ನುತ್ತಾರೆ: - “ಆಗ ಭರೋಚ ಪ್ರಾಂತದ ದೊರೆಯಾದ ಮಾರಾಶರ್ವನು ಬಂದು ಗೋವಿಂದನನ್ನು ನಯವಿನಯಗಳಿಂದ ಪೂಜಿಸಿ ತನ್ನ- ಎಂದರೆ ಮಾರಾಶರ್ವನ *ಶ್ರೀಭವನ'ಕ್ಕೆ, ಅಥವಾ ಈಗಿನ ಕಾಲದಲ್ಲಿ (ಸರ್ಭೋನ್‌? (Sarbhon) ಎಂದು ಹೆಸರಾದ ತನ್ನ ರಾಜಧಾನೀ ಪ್ರದೇಶಕ್ಕೆ ಕರಕೊಂಡು ಹೋಗಿ ಸತ್ಕರಿಸಿದನು. ಗೋವಿಂದನು ಮಾರಾಶರ್ವನ ಶ್ರೀಭವನದಲ್ಲಿ ಮಳೆಗಾಲವನ್ನು - ಎಂದರೆ ಕ್ರಿ. ಶ. ೮೦೮ನೆ ಇಸವಿಯ ಮಳೆಗಾಲವನ್ನೆಲ್ಲ ಕಳೆದನು. ಅವನ ಮಗನಾದ ನೃಪತುಂಗನು ಆಗ ಅಲ್ಲೆ ಜನಿಸಿದುದಾಗಿ ತೋರುತ್ತಿದೆ” (ಶ್ರೀಭವನ'ವೆಂದರೆ ಮಾರಾಶರ್ವನ ರಾಜಧಾನಿ ಎಂದು ಅವರು ಭಾವಿಸಿದುದು ಸರಿಯಲ್ಲವೆಂದೇ ನಮ್ಮ ವಿಶ್ವಾಸಪೂರ್ವಕ ಸೂಚನೆ. ಗರ್ಭಿಣಿಯಾಗಿದ್ದ ರಾಣಿಯನ್ನು ದಿಗ್ವಿಜಯಾವಸರದಲ್ಲಿ ಮಹಾ ಪ್ರತಾಪಿ ರಾಜರಾರೂ ಕರ ಕೊಂಡು ಹೋಗುವರೆ? ಹೋದರೂ ವರೆಗೂ ಹಗೆತನದಲ್ಲಿದ್ದ ಮಾರಾ ಶರ್ವನ ಅರಮನೆಯಲ್ಲಿ ಮಹಾರಾಣಿ ಹೆರುವುದು ಎಂದರೇನು? ಅಲ್ಲಿ ಮಳೆ ಗಾಲವೆಲ್ಲವನ್ನೂ ಕಳೆವುದು ಎಂದರೇನು? ಕಾರ್ಯವನ್ನು, ಶ್ರೀ. ಅಳ್ತೇ ಕರರೇ ಸಾರುವಂತೆ ಭಾರತ ಚಕ್ರವರ್ತಿ ಗೋವಿಂದನು ಅನುಮತಿಸುವುದು ಎಂಬುದನ್ನು ಕೇಳಿ ಭಾವಿಸಿ ನಮಗಂತೂ ನೀರಿನಲ್ಲಿ ಕಂದೆರೆದಂತಾಗುತ್ತಿದೆ. ನಾವು ಮೇಲೆ ಸಾಧಾರವಾಗಿ ಚರ್ಚಿಸಿ ನಿರ್ಧರಿಸಿದ ಆಂಶವನ್ನು ಪರಾಂಬರಿಸಿ ದಲ್ಲಿ ತಾತ್ಕಾಲಿಕ ಭ್ರಮೆಯ ಮಂಜೆಲ್ಲವೂ ಮಾಸಿಹೋಗುವುದು; ದಂತಿ ದುರ್ಗಾದಿಗಳಾಗಿ ಗೋವಿಂದನ ವರೆಗಿನ ರಾಷ್ಟ್ರಕೂಟ ರಾಜರ ರಾಜಧಾನಿ ವಿಂಧ್ಯಾದ್ರಿ ಪಾದದಲ್ಲಿ ರೇವಾನದಿಯ ಹತ್ತಿರದಲ್ಲಿ ನೆಲೆನಡೆದು ಹೆಸರ ನ್ನೊಂದಿದ ರೇವಾನಗರಿಯೇ ಆಗಿತ್ತು; ಅವರೆಲ್ಲರ ಅಥವಾ ಗೋವಿಂದರಾಜನ ಅರಮನೆಯ ಹೆಸರು «ಶ್ರೀಭವನ' ಎಂದಾಗಿತ್ತು ಎಂದು ಸಿದ್ಧಿ ಸುವುದು.

ಇನ್ನೂ ಒಂದು ವಿಶೇಷವಾದ ಪೋಷಕಾಧಾರವಾಗಿರುವ ಅದೇ ಗೋವಿಂದನ ಮಂಡಲ ದಾನ ಶಾಸನದೊಳಗಿನ ವಾಕ್ಯಗಳನ್ನು ಪರಾಂಬರಿಸಿ ನೋಡಿರಿ:-

ದಿ ಇತು

. ಶ್ರೀ ಮಯೂರ ಖಂಡೀಸಮಾವಾಸಿ ತೇನ ಮಯಾ ಮಾತಾಸಿತ್ರೋರಾತ್ಮನ ಶ್ಹೈಹಿಕಾಮುಸ್ಮಿಕ ಪುಣ್ಯಯಶೋಭಿ

ವೃದ್ಧಯೇ ವಾ (ಧಾ?) ರಾಶಿ ವಾಸ್ತವ್ಯತ ತ್ರೈವಿದ್ಯ |

ಸಾಮಾನ್ಯ ಕಾಶ್ಯಪ ಗೋ [ತ್ರ] ಬಹ್ಮೃಚ ಸಬ್ರಹ್ಮಚಾರಿ ಮಾಸೋ ಪವಾಸಿಯ ಪೌತ್ರಾಯ ಸಣ್ಣ ಸಾವಿಭಟ್ರ ಪುತ್ರಾಯ

ರಿಸಿಯ ಪ್ಪಭಟ್ರಾಯ ತಥಾ ರಿಸಿಯಪ್ಪಭಟ್ಟೀನ ಏರಂಡವಲ್ಲೀ ವಾಸ್ತವ್ಯ [ತ] ಗೌತಮಗೋತ್ರ ಮಹಿ (ಹೀ) ಧರಭಟ್ಟಾಯ ಭೂಮೇ: ನಿವರ್ತನ |

ಶತಂದತ್ತಂ ತಥಾ ಕರಹಾಡ ವಾಸ್ತವ್ಯತ ಚಾತುರ್ವಿದ್ಯ ಸಾಮಾನ್ಯ ಕಾಶ್ಯಪ ಸಗೋತ್ರ ಏಂ ಕ. ಸಬ್ರಹ್ಮಚಾರಿಣೇ ವ್ಯಾಸ

ಭಟ್ಟಾಯ ಅಶೀತಿನಿವರ್ತನಾನಿ ಸುಭೂಮೇಃ ದತ್ತಾನಿ ಖೇಡ ನಿಷ ಯಾಂತರ್ಗತಃ ದಶಪುರ ಗ್ರಾಮಃ ತಥಾ ಸುಕಲೀನಾ $

ಗ್ರಾಮಧಾನಂ ಪಿಪ್ರರಿಕಾದ್ವಯಂ ತಿಯಡಿ ಗ್ರಾಮಧಾನಂ ಭಗಾಲ (ಗಲಿ) ಗ್ರಾಮಧಾನಂ ಗ್ರಾಮಧಾನ ಪಂಚಕ ಸಮನ್ವಿತಃ ತಸ್ಯ

ಚಾಘಾಟನಾನಿ ಪೂರ್ವತಃ ಇಂದವುರಿಕಾಗ್ರಾಮಃ ದಕ್ಸಿಣತಃ ದೇವ ಭೋಗ ತಿಯಡಿ ಗ್ರಾಮಃ

ಪಶ್ಚಿಮತಃ ಲಾಡಾವಲ್ಲಿಕಾಗ್ರಾಮಃ ಪಶ್ಚಿಮೋತ್ತರತಃ ಪಿಟ್ಟಿ.... ಕಾಗ್ರಾಮಃ ಉತ್ತರತಃ

ವಿಂಧ್ಯಪರ್ವತಃ ಏನಮಯಂ ಚತುರಾಘಾಟನೋಪಲಕ್ಸಿತೋ ಗ್ರಾಮಃ ಸೋದ್ರಂಗಃ ಸಪರಿಕರಃ

ಆಗಿನ ಕಾಲದ ಕನ್ನಡನಾಡಿನ ವಿಸ್ತೃತಿಯನ್ನು ವಿವೇಚಿಸಲು